ಯುದ್ಧಪೀಡಿತ ಇರಾನ್ ನಿಂದ 110 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಾಸ್
ಅರ್ಮೆನಿಯಾ: ಇರಾನ್-ಇಸ್ರೇಲ್ ಸಂಘರ್ಷ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಸ್ವದೇಶಕ್ಕೆ ಕರೆತರುವ ಕೆಲಸವನ್ನು ಭಾರತ ಆರಂಭಿಸಿದೆ. ಯುದ್ಧಪೀಡಿತ ಇರಾನ್ ನಿಂದ ಸ್ಥಳಾಂತರಿಸಲಾದ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ.
ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧು’ ಎಂದು ಹೆಸರಿಟ್ಟಿದೆ. ಇರಾನ್‌ನ ಅರ್ಮೇನಿಯಾ ವೈದ್ಯಕೀಯ ವಿವಿಯಲ್ಲಿ ಓದುತ್ತಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬುಧವಾರ ತಡರಾತ್ರಿ ದೆಹಲಿಗೆ ಬಂದಿಳಿದಿದೆ.
ವಿಮಾನದಲ್ಲಿದ್ದವರಲ್ಲಿ ಜಮ್ಮು ಮತ್ತು ಕಾಶ್ಮೀರದ 90 ವಿದ್ಯಾರ್ಥಿಗಳು ಇದ್ದರು. ಸರ್ಕಾರದ ಸಂಘಟಿತ ಸ್ಥಳಾಂತರಿಸುವ ಪ್ರಯತ್ನದ ಭಾಗವಾಗಿ ವಿದ್ಯಾರ್ಥಿಗಳನ್ನು ಈ ಹಿಂದೆ ಅರ್ಮೇನಿಯಾಗೆ ಸ್ಥಳಾಂತರಿಸಲಾಗಿತ್ತು.





