March 15, 2026

ಬಂಟ್ವಾಳ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image-1678988067-1773531908831.jpg

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೇರಳದ ಮೂಲದ ವಾರೆಂಟ್ ಆರೋಪಿ ಎರ್ನಾಕುಲಂ ಜಿಲ್ಲೆಯ ಕುಟ್ಟಿಂಚಾಲ್ ನಿವಾಸಿ ಪ್ರಿನ್ಸ್ ಟಿ.ಜೆ.ಜೋಶ್(43) ಯನ್ನು ಕುಟ್ಟಂಪುಝದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಳಿಕ ಆತನನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಬಂಟ್ವಾಳ ಎಎಸ್ಪಿ ಯಶ್ ಕುಮಾರ್ ಶರ್ಮಾ ಅವರ ನಿರ್ದೇಶನದಂತೆ ಗ್ರಾಮಾಂತರ ಠಾಣಾ ಪಿಎಸ್‌ಐ ಮಂಜುನಾಥ ಟಿ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕೃಷ್ಣಕಾಂತ ಕೆ. ಹಾಗೂ ಸಿಬಂದಿ ಸಂತೋಷ್‌, ಶಿವಾನಂದ ಮಡ್ಡಿ ಆತನ ಬಂಧನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!