ವೈಯರ್‌ನಿಂದ ಕತ್ತು ಬಿಗಿದು ಗೆಳತಿಯ ಕೊಲೆ: ಆರೋಪಿ ಅರೆಸ್ಟ್
ಬೆಂಗಳೂರು: ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯನ್ನು ವಿವಾಹಿತ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.
ಕೊಡಗು ಮೂಲದ ರಂಜಿತಾಳನ್ನು (23) ಆರೋಪಿ ಅಯ್ಯಪ್ಪ ಕೊಲೆ ಮಾಡಿದ್ದಾನೆ. ಇಬ್ಬರು ಲಿವ್ ಇನ್ ರಿಲೇಶನ್ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ.
ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದಿರಲಿಲ್ಲ. ಇದೀಗ ಈ ವಿಚಾರ ತಿಳಿದು ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆ ತಾರಕಕ್ಕೇರಿ ಆರೋಪಿ ವೈಯರ್‌ನಿಂದ ಯುವತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.




