3 ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ: ಪತಿಯ ಬಂಧನ
ಚಿಂತಾಮಣಿ: ಮದುವೆಯಾಗಿ ಕೇವಲ 9 ತಿಂಗಳಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು 3 ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರತಿಭಾ (24) ಮೃತ ಮಹಿಳೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ಪ್ರತಿಭಾ ಸಾವಿನ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರಿನ ಕೆ.ಆರ್.ಪುರಂ ತಾಲೂಕಿನ ಬಿದರಹಳ್ಳಿ ಗ್ರಾಮದ ಪ್ರತಿಭಾ ಅವರನ್ನು ನಾಯನಹಳ್ಳಿ ಗ್ರಾಮದ ಬಚ್ಚನ್ನಗಾರಿ ಕೃಷ್ಣಾರೆಡ್ಡಿ ಅವರ ಪುತ್ರ ರಘು ಎಂಬುವವರಿಗೆ 2026ರ ಜನವರಿ 29ರಂದು ಚಿಂತಾಮಣಿಯ ಸುವರ್ಣ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಪದವೀಧರೆಯಾಗಿದ್ದ ಪ್ರತಿಭಾ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಪೋಷಕರು ತಿಳಿಸಿದ್ದಾರೆ.



