November 12, 2026

ಸ್ಕೂಟರ್‌ಗೆ ಬಸ್ ಢಿಕ್ಕಿ: ಪಿಯುಸಿ ವಿದ್ಯಾರ್ಥಿನಿ ಸಾವು

9e21cbd1-6e19-4dd5-a9c3-7d9da724ba3f

ಮೈಸೂರು: ಸ್ಕೂಟರ್‌ಗೆ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮೈಸೂರು ಅರಮನೆಯ ಸನಿಹದ ಚಾಮರಾಜ ವೃತ್ತದ ಬಳಿ ನಡೆದಿದೆ.

ವೈಷ್ಣವಿ (17) ಮೃತ ವಿದ್ಯಾರ್ಥಿನಿ. ಮೈಸೂರಿನ ಎನ್‌ಆರ್ ಮೊಹಲ್ಲಾ ನಿವಾಸಿ ವೆಂಕಟೇಶ್ ಮತ್ತು ಜ್ಯೋತಿ ದಂಪತಿ ಪುತ್ರಿ ವೈಷ್ಣವಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

ಟ್ಯೂಷನ್ ಮುಗಿಸಿಕೊಂಡು ತಂದೆಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!