November 4, 2026

ಆಸ್ತಿ ವಿವಾದ: ಮಹಿಳೆಯ ತಲೆ ಕಡಿದು ಹತ್ಯೆ

608b8041-c5dd-4a4c-956c-6300ebb8eb86

ಹೈದರಾಬಾದ್: ಕೃಷಿ ಭೂಮಿ ವಿವಾದದ ಹಿನ್ನೆಲೆಯಲ್ಲಿ 26 ವರ್ಷದ ಮಹಿಳೆಯನ್ನು ಪತಿಯ ಅಣ್ಣಂದಿರು ಶಿರಚ್ಛೇದನ ಮಾಡಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಕೊಯಿಲ್‌ಕೊಂಡ ಮಂಡಲದ ಚಿಂತಲ್ ತಾಂಡಾದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕತ್ರಾವತ್ ಸುನೀತಾ (26) ಎಂದು ಗುರುತಿಸಲಾಗಿದೆ. ಸುಮಾರು 10 ವರ್ಷಗಳ ಹಿಂದೆ ಚಿಂತಲ್ ತಾಂಡಾದ ಕತ್ರಾವತ್ ಬಲರಾಮ್ ಎಂಬುವವರನ್ನು ಸುನೀತಾ ವಿವಾಹವಾಗಿದ್ದರು. ದಂಪತಿಗೆ ರಿಷಿಕಾ ಮತ್ತು ಶೈಲಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬಲರಾಮ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು.

ಸುಮಾರು ಒಂದು ವರ್ಷದ ಹಿಂದೆ ಬಲರಾಮ್ ಅವರ ಅಣ್ಣಂದಿರಾದ ಮಾನ್ಯ ನಾಯಕ್ ಮತ್ತು ಪಾಂಡು ನಾಯಕ್ ಆತನನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿದ್ದರು. ಈ ನಡುವೆ ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನದ ಬಳಿಕ ಬಲರಾಮ್‌ಗೆ ಸೇರಿದ ಸುಮಾರು ಒಂದೂವರೆ ಎಕರೆ ಕೃಷಿ ಭೂಮಿಯನ್ನು ಸುನೀತಾ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಆಕೆಯ ಭವಿಷ್ಯದ ಭದ್ರತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ.

error: Content is protected !!