ಪೇಶ್ ಇಮಾಮ್, ಮುಅದ್ದೀನ್ ಗಳ ಗೌರವಧನ ಪಾವತಿ: ಯು.ಟಿ.ಖಾದರ್
ಬೆಂಗಳೂರು: ರಾಜ್ಯ ವಕ್ಸ್ ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಪೇಶ್ ಇಮಾಮ್ ಮತ್ತು ಮುಅದ್ದೀನ್ ಗಳ ಗೌರವಧನ ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನವೀಕರಿಸಲಾಗುತ್ತಿದ್ದು, ಅತ್ಯಂತ ಪಾರದರ್ಶಕ ಹಾಗೂ ಡಿ.ಬಿ.ಟಿ ತಂತ್ರಜ್ಞಾನದ ಮೂಲಕ ಗೌರವಧನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ವಕ್ಸ್ ಮಂಡಳಿಯ ಅಡಿಯಲ್ಲಿರುವ ವಕ್ಸ್ ಸಂಸ್ಥೆಗಳಲ್ಲಿ ಒಟ್ಟು 15,936 ಫಲಾನುಭವಿಗಳಿದ್ದು , ಇದರಲ್ಲಿ 8,032 ಪೇಶ್ ಇಮಾಮ್‌ಗಳು ಹಾಗೂ 7,904 ಮುಅದ್ದೀನ್‌ಗಳು ಒಳಗೊಂಡಿದ್ದಾರೆ. ಪ್ರಸಕ್ತ ಸಾಲಿನಿಂದ ಆರ್ಥಿಕ ಇಲಾಖೆಯ ಆದೇಶದಂತೆ ಹಳೆಯ ಚೆಕ್ ಪಾವತಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.



