ಬಾಲನಟನಾಗಿ ಮಲೆಯಾಳಂನಲ್ಲಿ ಗಮನ ಸೆಳೆದಿದ್ದ ಯುವ ನಟ ಶವವಾಗಿ ಪತ್ತೆ
ಕೇರಳ: ಒಂದು ಕಾಲದಲ್ಲಿ ಬಾಲನಟನಾಗಿ ಮಲೆಯಾಳಂ ಚಿತ್ರರಂಗದಲ್ಲಿ ಗಮನ ಸೆಳೆದಿದ್ದ ಯುವ ನಟನೊಬ್ಬ 27ನೇ ವಯಸ್ಸಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿತ್ರರಂಗದಲ್ಲಿ ಶಾಕ್ ಮೂಡಿಸಿದೆ.
ಕೇರಳದ ಪಯ್ಯನ್ನೂರಿನ ನಿವಾಸದಲ್ಲಿ ನಟ ಹರಿಮುರಳಿ (27) ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಾಹಿತಿಯ ಪ್ರಕಾರ, ತಮ್ಮ ಮನೆಯಲ್ಲಿ ಹರಿಮುರಳಿ ಶವವಾಗಿ ಪತ್ತೆಯಾಗಿದ್ದು, ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




