March 14, 2026

ಉಡುಪಿ: ಅಬಕಾರಿ ಇಲಾಖೆಯ ಡಿಸಿ ಲೋಕಾಯುಕ್ತ ಬಲೆಗೆ: ಬರೋಬ್ಬರಿ 8.69 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ

0
image_editor_output_image-1106673719-1773444848943.jpg

ಉಡುಪಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಉಡುಪಿ ಲೋಕಾಯುಕ್ತ ಪೊಲೀಸರು ಅಬಕಾರಿ ಇಲಾಖೆಯ ಡಿಸಿ ಶ್ರೀನಿವಾಸ್ ಟಿ.ಎಂ. ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಬರೋಬ್ಬರಿ 8.69 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

15 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ: ಮಾರ್ಚ್ 11ರಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಉಡುಪಿ ಜಿಲ್ಲಾ ಅಬಕಾರಿ ಅಧಿಕಾರಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 15 ಸ್ಥಳಗಳಲ್ಲಿ ಹಠಾತ್ ಶೋಧ ನಡೆಸಿದ್ದರು. ಈ ವೇಳೆ ಅಧಿಕಾರಿ ಹೊಂದಿರುವ ಕುಬೇರ ಸಂಪತ್ತು ಬಯಲಿಗೆ ಬಂದಿದೆ.

ಸಿಕ್ಕಿದ ಆಸ್ತಿ ಎಷ್ಟು?: ಲೋಕಾಯುಕ್ತ ಪೊಲೀಸರು ನೀಡಿರುವ ಮಾಹಿತಿಯಂತೆ ಸಿಕ್ಕಿರುವ ಸ್ಥಿರ ಮತ್ತು ಚರ ಆಸ್ತಿಗಳ ವಿವರ ಹೀಗಿದೆ:

ಸ್ಥಿರ ಆಸ್ತಿ (₹6.90 ಕೋಟಿ): 11 ನಿವೇಶನಗಳು, 6 ವಾಸದ ಮನೆಗಳು ಹಾಗೂ 31 ಎಕರೆ ಕೃಷಿ ಜಮೀನು.

ಚರ ಆಸ್ತಿ (₹2.66 ಕೋಟಿ): ಸುಮಾರು ₹1.47 ಕೋಟಿ ಮೌಲ್ಯದ ಚಿನ್ನಾಭರಣ, ₹3.95 ಲಕ್ಷ ನಗದು, ₹17 ಲಕ್ಷದ ವಾಹನಗಳು ಹಾಗೂ ₹25.75 ಲಕ್ಷ ಬ್ಯಾಂಕ್ ಠೇವಣಿ.

Leave a Reply

Your email address will not be published. Required fields are marked *

error: Content is protected !!