February 16, 2025

ಅಬುಧಾಬಿಯಲ್ಲಿ ಪಿರಿಸಪ್ಪಾಡ್ರೋ ಒರುನಾಲ್ 2.0

0

ಅಬುಧಾಬಿ:ಕರ್ನಾಟಕ ಎಸ್. ಕೆ. ಎಸ್. ಎಸ್. ಎಫ್  ಅಬುಧಾಬಿ ವತಿಯಿಂದ “ಪಿರಿಸಪ್ಪಾಡ್ರೋ ಒರುನಾಲ್ 2.0” ಕುಟುಂಬ ಸಮ್ಮಿಲನವು ಅಬುಧಾಬಿ ಬನಿಯಾಸ್ ಫಾರ್ಮ್ ಹೌಸ್ ನಲ್ಲಿ ಜನಾಬ್ ಅರೀಸ್ ಮದ್ದಡ್ಕ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು   ಕರ್ನಾಟಕ ಎಸ್. ಕೆ. ಎಸ್. ಎಸ್. ಎಫ್ ಅಧ್ಯಕ್ಷರಾದ ಜನಾಬ್ ಶಹೀರ್ ಹುದವಿ ಉಸ್ತಾದರು ನೆರವೇರಿಸಿದರು. ಬೆಳಿಗ್ಗೆ ಸಮಯ  10.00 ಘಂಟೆ ಸುಮಾರಿಗೆ ಆರಂಭವಾಗಿ ಸಂಜೆ 8.00 ರ ತನಕ ನಡೆದ ಕಾರ್ಯಕ್ರಮದಲ್ಲಿ
   ಯು. ಎ. ಇ ಯ ವಿವಿಧ ಭಾಗಗಳಿಂದ ಬಂದ ಎಸ್. ಕೆ. ಎಸ್. ಎಸ್. ಎಫ್
ಅನಿವಾಸಿ  ಕನ್ನಡಿಗರ ಕುಟುಂಬದವರು ಮತ್ತು ಸದಸ್ಯರು ಬಾಗವಹಿಸಿದರು.


ಮಕ್ಕಳಿಗೆ ವಿವಿಧ ಬಗೆಯ ಸ್ಪರ್ಧಾತ್ಮಕ ಕ್ರಿಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಸಲಾಯಿತು. ಮಕ್ಕಳ ಕಲರವ ಒಮ್ಮೆ  ಬಾಲ್ಯದ ನೆನಪುಗಳು  ಕಣ್ಣ ಮುಂದೆಯೇ ಹಾದು ಹೊದಂತಾಯಿತು. ಆಟೋಟ ಸ್ಪರ್ಧೆಗಳನ್ನು ಯಾಹ್ಯಾ ಕೊಡ್ಲಿಪೇಟೆ ಅಚ್ಚುಕಟ್ಟಾಗಿ ನಿರ್ವಹಿಸಿದರು,
ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶ ಮಾಡಿದ್ದು ಮಹಿಳೆಯರಿಗಾಗಿ ಕುಕ್ಕರಿ ಶೋ, ಪ್ರತ್ಯೇಕ ಆಟೋಟಗಳು ಸ್ವಯಂ ಸೇವಕರು ಮಹಿಳೆಯರೇ ಆಗಿದ್ದು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು.
ಕುಟುಂಬವನ್ನು ಬಿಟ್ಟು ಅನಿವಾಸಿಯಾಗಿ ಬಿಡುವಿಲ್ಲದೆ ಕೆಲಸ ಮಾಡುವವರು, ಕುಟುಂಬದೊಂದಿಗೆ ಜೀವನ ನಡೆಸುವವರು, ಹಿರಿಯರು ಮಕ್ಕಳು ಎಲ್ಲರೂ ಒಟ್ಟಾಗಿ ಜೀವನ ಜಂಜಾಟದಿಂದ ಒಂದು ದಿನ ವಿರಾಮ ಮಾಡಿ ಈ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಜರ್ಮನಿಯಲ್ಲಿ ನಡೆದ ಒಲಿಂಪಿಕ್ ಕಿಚನ್  ಯು. ಎ. ಇ ತಂಡವನ್ನು ಪ್ರತಿನಿಧಿಸಿದ ಚೆಫ್ ಅಸೀಲ್ ರವರ “Ice Carving” ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದು. ಹಾಗೆಯೇ
ಶಿಸ್ತಿನಿಂದ ಕೂಡಿದ ಸಮವಸ್ತ್ರದಾರ ಕಾರ್ಯಕರ್ತರ ತಂಡ   ವಿಶೇಷ ಮೆರುಗು ನೀಡಿತು . ಆಟೋಟ ಸ್ಪರ್ಧೆಗಳನ್ನು ಯಾಹ್ಯ ಕೊಡ್ಲಿಪೇಟೆ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಹಸ್ಸನ್ ದಾರಿಮಿ ದುವಾ ನಿರ್ವಹಿಸಿದರು,ಝೈನ್ ಸಖಾಫಿ ಪ್ರಸ್ತಾವಿಕ ಭಾಷಣ ಮಾಡಿದರು, ಹನೀಫ್ ಹರಿಯಮೂಲೆ ಹನಿಫ್ ಅರಿಯಮೂಲೆ ತಮ್ಮ ಮಾತಿನಲ್ಲಿ ಕಳೆದ ವರ್ಷದ ಕಾರ್ಯಕ್ರಮವನ್ನು ನೆನಪಿಸುತ್ತಾ ಅಂದಿನ ಜನರ ಉತ್ಸಾಹವೇ ಈ ಕಾರ್ಯಕ್ರಮಕ್ಕೆ  ಪ್ರೇರಣೆಯಾದದ್ದು ಅಂದರು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಜನಾಬ್ ಮೊಯ್ದೀನ್ ಕುಟ್ಟಿ ಹಾಜಿ ದಿಬ್ಬ, ಮಹಮ್ಮದ್ ಅಲಿ ಉಚ್ಚಿಲ್ , ಅಶ್ರಫ್ ಬೈಲೂರ್, ಅನ್ಸಾರ್ ಬೆಳ್ಳಾರೆ ,ಶರೀಫ್ ಮೂಸ ಕುದ್ದುಪದವು(ಸಹಚಾರಿ ಎಸ್. ಕೆ. ಎಸ್. ಎಸ್. ಎಫ್ D.K Dist) ಅಶ್ರಫ್ ಶಾ ಮಾಂತುರು, ಶರೀಫ್ ಕಾವು, ಸಲೀಂ ಆಮ್ಚಿನಡ್ಕ, ಶರೀಫ್ ಕೊಡ್ನೀರ್ , ಅಬ್ಬುಚ ಶಕಲೇಶ್ ಪುರ ಮುಂತಾದ ಪ್ರಮುಖ ಬಾಗವಹಿಸಿದರು.

 

 

ಪುರುಷರೂ,ಮಹಿಳೆಯರು, ಮಕ್ಕಳೂ ಸೇರಿ ಸುಮಾರು 600 ಕ್ಕೂ ಮಿಕ್ಕಿ ಕನ್ನಡಿಗರು ಸೇರುವ ಮೂಲಕ ಮರಳು ನಾಡಿನಲ್ಲಿ ಕನ್ನಡದ ಇಂಪನ್ನು ಹರಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಒಬ್ಬರಿಗೆ ಉಮ್ರಾ ನಿರ್ವಹಿಸುವ ಅವಕಾಶವನ್ನು ಕೂಪನ್ ಎತ್ತುವ ಮೂಲಕ ನೀಡಲಾಯಿತು.

ಹಾಗೆ  ಮೊದಲು ಬಂದವರಿಗೂ ಕೂಪನ್ ಎತ್ತುವ ಮೂಲಕ  ಬಹುಮಾನ ನೀಡಿದ್ದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಕಾರ್ಯಮದ  ಆಕರ್ಷಣೆಯಾದ  ಸ್ಟ್ರೀಟ್ ಫುಡ್   ಅಂಗಡಿಗಳು   ಊರನ್ನು ನೆನಪಿಸುವಂತೆ ಮಾಡಿತು.

ಮಾನವ ಸರಪಳಿ ನಡೆಸಿ ಸಂದೇಶ  ನೀಡಲಾಯಿತು

ಈ ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನವನ್ನು ನಡೆಸುವ ಮೂಲಕ ಎಸ್. ಕೆ. ಎಸ್. ಎಸ್. ಎಫ್ ಸಂಘಟನೆಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು

  ನಾಯಕರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಅವಿರತ ಶ್ರಮ ಈ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಾಣಲು ಕಾರಣವಾಯಿತು.

ಆರಂಭದಿಂದ ಕೊನೆಯವರೆಗೆ ಊಟ ಹಾಗೂ ಉಪಾಹಾರ ವ್ಯವಸ್ಥೆ ಮಾಡಿದ್ದು ನೆರೆದವರೆಲ್ಲರೂ ಅತೀ ಉತ್ಸಾಹದಿಂದ ಸವಿದರು.ತಂಸೀಫ್ ಅವರು ಕನ್ನಡ, ಬ್ಯಾರಿ, ತುಳು, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಮನಮೋಹಕವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯಲ್ಲಿ ಜನಾಬ್ ಶಾಕಿರ್ ಕೂರ್ನಡ್ಕ ವಂದಿಸಿ, ದಾರಿಮಿ ಉಸ್ತಾದರ ದುಆ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಿತು.

Leave a Reply

Your email address will not be published. Required fields are marked *

error: Content is protected !!