ಮನೆಯ ಮುಂದೆ ಚಾರ್ಜ್ ಗೆ ಇಟ್ಟಿದ EV ಕಾರು ಸ್ಪೋಟ: ಬಾಲಕಿ ಸೇರಿ ಒಂದೇ ಕುಟುಂಬದ 7 ಮಂದಿ ಸಜೀವ ದಹನ
ಇಂದೋರ್: ಮನೆಯ ಮುಂದೆ ಚಾರ್ಜ್ ಗೆ ಇಟ್ಟಿದ ಇವಿ ಕಾರು ಸ್ಪೋಟಗೊಂಡ ಪರಿಣಾಮ ಮನೆ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ಬಾಲಕಿ ಸೇರಿದಂತೆ ಒಂದೇ ಕುಟುಂಬದ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಂದೋರ್ ನ ಬಂಗಾಳಿ ಚೌಕದ ಬ್ರಿಜೇಶ್ವರಿ ಅನೆಕ್ಸ್‌ನಲ್ಲಿರುವ ಮೂರು ಅಂತಸ್ತಿನ ವಸತಿ ಕಟ್ಟಡದಲ್ಲಿ ಬುಧವಾರ ಮುಂಜಾನೆ ಘಟನೆ ಸಂಭವಿಸಿದೆ.
ಮೃತರನ್ನು ವಿಜಯ್ ಸೇಥಿಯಾ (65), ಛೋಟು ಸೇಥಿಯಾ (22), ಸುಮನ್ (60), ಮನೋಜ್ ಪುಗಾಲಿಯಾ (65), ಸಿಮ್ರಾನ್ (30), ರಾಶಿ ಸೇಥಿಯಾ (12), ಮತ್ತು ಟಿನು (35) ಮೃತಪಟ್ಟ ದುರ್ದೈವಿಗಳು. ಸೌರಭ್, ಆಶಿಶ್ ಮತ್ತು ಹರ್ಷಿತ್ ಪುಗಾಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಮುಂಜಾನೆ 4 ಗಂಟೆ ಸುಮಾರಿಗೆ ಮನೆಯ ಹೊರಗೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಕಾರು ಚಾರ್ಜ್ ಮಾಡುವಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ತಿಳಿಸಿದ್ದಾರೆ.
ವಾಹನದಿಂದ ಹರಡಿದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಆವರಿಸಿದೆ. ಮನೆಯಲ್ಲಿದ್ದ ಸುಮಾರು 10 ಎಲ್‌ಪಿಜಿ ಸಿಲಿಂಡರ್‌ಗಳ ಪೈಕಿ ಕೆಲವು ಸ್ಫೋಟಗೊಂಡಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಯಿತು.




