March 18, 2026

ರೀಲ್ಸ್: ಪಿಸ್ತೂಲ್ ಲೋಡ್ ಮಾಡುವಾಗ ಎದೆಗೆ ಗುಂಡು ತಗಲಿ ಯುವಕ ಸಾವು

0
image_editor_output_image479771189-1773817336272.jpg

ನವದೆಹಲಿ : 28 ವರ್ಷದ ಯುವಕನೊಬ್ಬ ಪಿಸ್ತೂಲ್ ಲೋಡ್ ಮಾಡೋದನ್ನು ಕಲಿಯುವ ವೇಳೆ ಎದೆಗೆ ಶೂಟ್ ಮಾಡಿಕೊಂಡಿರುವ ಘಟನೆ ನವದೆಹಲಿಯ ದಲ್ಲುಪುರ ಎಂಬಲ್ಲಿ ನಡೆದಿದೆ.

ಪವನ್ (28) ಮೃತ ಯುವಕನಾಗಿದ್ದು ಪಿಸ್ತೂಲ್ ಲೋಡ್ ಮಾಡುವುದನ್ನು ಕಲಿಯುವಾಗ ಎದೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಸ್ನೇಹಿತ ಪವನ್‌ಗೆ ಗನ್ ಲೋಡ್ ಮಾಡುವುದನ್ನು ಹೇಳಿಕೊಡುತ್ತಿದ್ದ. ಬಳಿಕ ಅದನ್ನು ವಿಡಿಯೋ ಮಾಡುತ್ತಿದ್ದ. ಈ ವೇಳೆ ಮೃತ ಪವನ್ ಪಿಸ್ತೂಲ್ ನ್ನು ಎದೆ ಮೇಲೆ ಇಟ್ಟುಕೊಂಡಿದ್ದ.

ಆಗ ಸ್ನೇಹಿತ ಟ್ರಿಗರ್ ನ್ನು ಒತ್ತಬೇಡ ಎಂದು ಹೇಳಿದರೂ ಕೂಡ ಪವನ್ ಟ್ರಿಗರ್ ಒತ್ತಿದ್ದು ಗುಂಡು ಎದೆಯೊಳಗೆ ಹೊಕ್ಕು ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೂ ಪೊಲೀಸರ ಮಾಹಿತಿ ಪ್ರಕಾರ, ಬಳಸಿದ ಪಿಸ್ತೂಲ್‌ಗೆ ಪರವಾನಗಿ ಪಡೆಯಲಾಗಿದ್ದು, ಪವನ್ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಗನ್ ಎಂದು ತಿಳಿಯಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸದ್ಯ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!