ಬೆಳ್ತಂಗಡಿ: ಸೋಮಂತಡ್ಕ ಸಮೀಪ ಚರಂಡಿಯ ಮೇಲೇರಿದ ಬಸ್
![](https://prathidina.com/wp-content/uploads/2025/01/image_editor_output_image254933377-1738130703337.jpg)
ಬೆಳ್ತಂಗಡಿ: ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್ ವೊಂದು ಮುಂಡಾಜೆ ಸಮೀಪದ ಸೋಮಂತಡ್ಕ ಸಮೀಪ ಚರಂಡಿಗೆ ಸರಿದ ಘಟನೆ ಜ. 28ರ ಮಂಗಳವಾರ ನಡೆದಿದೆ.
ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಮುಂಡಾಜೆ ಮೂಲಕ ಕಡಿರುದ್ಯಾವರದಿಂದ ಆಲಂದಡ್ಕ ಸಾಗುವ ಬಸ್ ಸುಮಾರು 4.30 ಕ್ಕೆ ಅಪಘಾತ ಸಂಭವಿಸಿದೆ.
ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಇದ್ದು ಬಹುತೇಕ ಮಂದಿಗೆ ಗಾಯವಾಗಿವೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮೋರಿ ಅಳವಡಿಸಲಾಗಿದೆ. ಈ ಸ್ಥಳದಲ್ಲಿ ಬಸ್ ನ ಸ್ಟೇರಿಂಗ್ ಕಟ್ ಅಥವಾ ಬ್ರೇಕ್ ಫೈಲ್ ನಿಂದಾಗಿ ಬಸ್ ಸಮೀಪದ ಮೋರಿಗೆ ತಾಗಿ ನಿಂತಿದೆ.