ಬಂಟ್ವಾಳ: ರೆಸಿಡೆನ್ಸಿ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳವು: ಕಳವಿನ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆ
![](https://prathidina.com/wp-content/uploads/2025/01/image_editor_output_image1348990751-1738130869174.jpg)
ಬಂಟ್ವಾಳ: ರೆಸಿಡೆನ್ಸಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ವೊಂದು ಕಳವಾದ ಘಟನೆ ನಡೆದಿದ್ದು,ಕಳವು ಮಾಡುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ನರಿಕೊಂಬು ಗ್ರಾಮದ ರಥಬೀದಿಯಲ್ಲಿರುವ ರೆಸಿಡೆನ್ಸಿ ವೊಂದರ ಮುಂಭಾಗದಲ್ಲಿ ನಿಲ್ಲಿಸಿಲಾಗಿದ್ದ ಬೈಕ್ ವೊಂದನ್ನು ಜ.26 ರ ಆದಿತ್ಯವಾರ ರಾತ್ರಿ ವೇಳೆ ಕಳವು ಮಾಡಿದ್ದಾರೆ. ಮೆಸ್ಕಾಂ ಉದ್ಯೋಗಿ ಆನಂದ ಎಂಬವರು ನರಿಕೊಂಬು ರಥಬೀದಿಯಲ್ಲಿರುವ ರೆಸಿಡೆನ್ಸಿ ವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೆಲಸ ಮುಗಿಸಿ ಸಂಜೆ ವೇಳೆ ರಸ್ತೆಗೆ ತಾಗಿಕೊಂಡಿರುವ ಮನೆಯ ಮುಂಭಾಗದಲ್ಲಿ ಬೈಕ್ ನಿಲ್ಲಿಸಿದ್ದರು. ಪ್ರತಿ ದಿನ ಇವರು ಇಲ್ಲಿಯೇ ಬೈಕ್ ನಿಲ್ಲಿಸುತ್ತಿದ್ದು, ಆದಿತ್ಯವಾರ ಕೂಡ ಅದೇ ಜಾಗದಲ್ಲಿ ನಿಲ್ಲಿಸಿ ಹೋಗಿದ್ದರು.