April 24, 2026

ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೇರಿಕ- ಇಸ್ರೇಲ್ ಬಾಂಬ್ ದಾಳಿ: ಕನಿಷ್ಠ 40 ಮಂದಿ ಸಾವು

0
image_editor_output_image-159619561-1773098803604.jpg

ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನ ಪೂರ್ವ ಭಾಗದಲ್ಲಿರುವ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ಪರಿಣಾಮವಾಗಿ ರಾಜಧಾನಿಯಲ್ಲಿ ಭಾರೀ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಕೆಲವೇ ನಿಮಿಷಗಳ ಅಂತರದಲ್ಲಿ ದೊಡ್ಡ ಸ್ಫೋಟ ಸಂಭವಿಸಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ.

ಆದರೆ ಸ್ಫೋಟದ ನಿಖರ ಗುರಿ ಅಥವಾ ಅದರ ಪರಿಣಾಮದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ನಗರದಲ್ಲಿ ದಿನವಿಡೀ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೊಮ್ಮೆ ಸ್ಫೋಟಗಳ ಶಬ್ದಗಳು ಕೇಳಿಬರುತ್ತಿವೆ ಎಂಬ ವರದಿಗಳು ತಿಳಿಸಿವೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಇದಷ್ಟೇ ಅಲ್ಲದೆ, ಇಸ್ಪೃಹಾನ್ ಸೇರಿದಂತೆ ಇರಾನ್ ನ ಇತರ ಪ್ರಮುಖ ನಗರಗಳನ್ನೂ ಗುರಿಯಾಗಿಸಲಾಗಿದೆ. ಪರಮಾಣು ಸೌಲಭ್ಯಗಳಿಗೆ ಸಮೀಪದಲ್ಲಿರುವುದರಿಂದ ಇಸ್ನಹಾನ್‌ ಪ್ರದೇಶದಲ್ಲಿ ಕಳವಳ ಹೆಚ್ಚಾಗಿದೆ. ಅಲ್ಲಿನ ಗವರ್ನರ್ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ ಎಂಬ ವರದಿಗಳೂ ಬಂದಿವೆ.

Leave a Reply

Your email address will not be published. Required fields are marked *

You may have missed

error: Content is protected !!