February 4, 2026

ಹಾವನ್ನು ಕೊಂದ ಯುವಕನನ್ನು ಒಂದೇ ಗಂಟೆಯಲ್ಲಿ ಕಚ್ಚಿ ಸಾಯಿಸಿದ ಮತ್ತೊಂದು ಹಾವು

0
image_editor_output_image1711146231-1730527182533.jpg

ಬರೇಲಿ : ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಗಾದೆ ಮಾತಿದೆ ಅದಕ್ಕೆ ತಕ್ಕಂತೆ ಅನೇಕ ಕಹಿ ಘಟನಾವಳಿಗಳು ಸುತ್ತ ಮುತ್ತ ಘಟಿಸುತ್ತಲೇ ಇರುತ್ತೆ. ಹಾವುಗಳು ಕೂಡ ತಮ್ಮ ವಿರೋಧಿಗಳ ಮೇಲೆ ಸೇಡು ತೀರಿಸುತ್ತವೆ ಎಂಬ ಸತ್ಯದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಯುವಕನೊಬ್ಬ ಹೊಲದಲ್ಲಿ ಕೆಲಸ ಮಾಡುವಾಗ ಹಾವೊಂದನ್ನು ಕಂಡು ಕೊಂದು ಹಾಕಿದ್ದ ಅಷ್ಟೇ ಅಲ್ಲದೆ ಹಾವಿನ ಮೇಲೆ ಕಾಲಿಟ್ಟು ತುಳಿದು ಹಿಂಸೆ ನೀಡಿದ್ದ. ಆದರೆ ಈ ಘಟನೆಯ ಒಂದೇ ಗಂಟೆಯ ಬಳಿಕ ಅದೇ ಯುವಕ ಮತ್ತೊಂದು ಹಾವಿಗೆ ಬಲಿಯಾಗಿದ್ದಾನೆ. ಮೃತ ಯುವಕನ ಹೆಸರು ಗೋವಿಂದ್ ಕಶ್ಯಪ್ (32). ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಬೆಳಗ್ಗೆ, ತಮ್ಮ ಗ್ರಾಮದ ಅತುಲ್ ಸಿಂಗ್ ಎಂಬವರ ಹೊಲದಲ್ಲಿ ಪೈರು ಕಟಾವು ಮಾಡುತ್ತಿದ್ದಾಗ ಹಾವೊಂದು ಕಾಣ ಸಿಕ್ಕಿದೆ. ಹಾವನ್ನು ನೋಡಿದ ಗೋವಿಂದ ದೊಣ್ಣೆಯಿಂದ ಹೊಡೆದು ಕಾಲಿನಿಂದ ತುಳಿದು ಸಾಯಿಸಿದ್ದಾನೆ. ಇದಾದ ಬಳಿಕ ಹಾವನ್ನು ಅಲ್ಲೇ ಬಿಟ್ಟು ಗೋವಿಂದ ಆಹಾರ ಸೇವಿಸಲು ಹೋಗಿದ್ದಾನೆ. ಆಹಾರ ಸೇವಿಸಿ ಹೊಡೆದು ಸಾಯಿಸಿದ ಹಾವಿನ ಬಳಿ ಬಂದಿದ್ದಾಗ ಅಲ್ಲೇ ಇದ್ದ ಮತ್ತೊಂದು ಹಾವು ಗೋವಿಂದ ಕೈಗೆ ಕಚ್ಚಿ ಸೇಡು ತೀರಿಸಿಕೊಂಡಿದೆ. ಹಾವು ಕಚ್ಚಿದ ಗೋವಿಂದ ಭಯದಿಂದ ಮನೆ ಕಡೆಗೆ ಓಡಿದ್ದಾನೆ ಆದರೆ ನಿತ್ರಾಣಗೊಂಡು ದಾರಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!