September 27, 2026

ಅತ್ಯಾಚಾರ, ಬೆದರಿಕೆ ಪ್ರಕರಣ: ಕ್ರಿಕೆಟಿಗ ಅಭಿಷೇಕ್ ಪೋರೆಲ್ ಬಂಧನ

0
photo

ಕೊಲ್ಕತ್ತಾ: ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಬಳಿಕ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಕ್ಯಾಪಿಟಲ್ಸ್ ತಂಡದ IPL ಆಟಗಾರ ಅಭಿಷೇಕ್ ಪೋರೆಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಆಟಗಾರ ಪೋರೆಲ್ ಅವರನ್ನು ಡಂಡಂ ಪೊಲೀಸ್ ಠಾಣೆ ವ್ಯಾಪ್ತಿಯ ಇಮಾಮಿ ನಗರದಿಂದ ಬಂಧಿಸಲಾಗಿದೆ ಎಂದು ಹೂಗ್ಲಿ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಕುನ್ವರ್ ಭೂಷಣ್ ಸಿಂಗ್ ತಿಳಿಸಿದ್ದಾರೆ.

 

ಜೂನ್‌ ನಲ್ಲಿ ದೂರು ದಾಖಲಿಸಿದ್ದ ವಿದ್ಯಾರ್ಥಿನಿ, ‘ವಿವಾಹವಾಗುವುದಾಗಿ ನಂಬಿಸಿ ಪೋರೆಲ್ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಬಳಿಕ ನನ್ನ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋರೆಲ್ ಅವರನ್ನು ಬಂಧಿಸುವಂತೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಮಧ್ಯೆ, ತಮ್ಮ ವಿರುದ್ಧದ ಆರೋಪಗಳನ್ನು ಪೋರೆಲ್ ನಿರಾಕರಿಸಿದ್ದಾರೆ. ಅವರು ಇಂಡಿಯಾ ‘ಎ’ ತಂಡದ ಸದಸ್ಯರಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು.

ದೂರಿನ ಪ್ರಕಾರ, ಪೋರೆಲ್ ಮತ್ತು ವಿದ್ಯಾರ್ಥಿನಿ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಪೋರೆಲ್ ಆಕೆಯಿಂದ ದೂರವಾಗಲು ಆರಂಭಿಸಿದ ಬಳಿಕ ಕಳೆದ ವರ್ಷದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!