August 15, 2026

ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ಸಂಭ್ರಮದ  ಸ್ವಾತಂತ್ರ್ಯ ದಿನಾಚರಣೆ

0
image_editor_output_image719824905-1786809117587

ಸೈಂಟ್ ರೀಟಾ ವಿಟ್ಲ ಇದರ ಆಶ್ರಯದಲ್ಲಿ ದಿನಾಂಕ 15.08.206 ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.

ಶಾಲಾ ವಾದ್ಯಗೋಷ್ಠಿಯೊಂದಿಗೆ ಅತಿಥಿ ಅಭ್ಯಾಗತರನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶಾಲಾ ಸಂಚಾಲಕರಾದ ವಂದನೀಯ ಫಾ.ಮೈಕೆಲ್ಲೋಬೋ, ಮುಖ್ಯ ಅತಿಥಿಯಾಗಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ವಲೇರಿಯನ್ ವೇಗಸ್ ಜಂಟಿ ಶಾಲಾ ಮುಖ್ಯ ಶಿಕ್ಷಕರಾದ ವಂ ಫಾ ಅಮಿತ್ ಪ್ರಕಾಶ್ ರೋಡ್ರಿಗಸ್, ಸಿಸ್ಟರ್ ಮರೀನ, ಸಿಸ್ಟರ್ ಜಾನೆಟ್ ಉಪಸ್ಥಿತರಿದ್ದರು ಶಾಲಾ ನಾಯಕರ ದ್ವಜಾವಂದನಾ ವಿಧಿಯೊಂದಿಗೆ ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಶಾಲಾ ಸಂಚಾಲಕರು ತಮ್ಮ ದಿವ್ಯ ಹಸ್ತದಿಂದ ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲು ವಿದ್ಯಾರ್ಥಿ ಸಮೂಹ ರಾಷ್ಟ್ರಗೀತೆ, ವಂದೇ ಮಾತರಂ, ನಾಡಗೀತೆ, ಧ್ವಜ ಗೀತೆಯೊಂದಿಗೆ ಸ್ವಾತಂತ್ರ ಸಂಭ್ರಮಾಚರಣೆಗೆ ಮೆರುಗು ನೀಡಿದರು.

ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಇದರಲ್ಲಿ ದೇಶಾಭಿಮಾನ ಬೀರುವ ನೃತ್ಯ, ಭಾಷಣ, ಹಾಡು ಜೊತೆಗೆ ವಿದ್ಯಾರ್ಥಿಗಳು ಸ್ವಾತಂತ್ರ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಾಧನೆ ಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಭವ್ಯ ಕಾರ್ಯಕ್ರಮವು ಶ್ರೀಮತಿ ಹೆಲೆನ್ ಪುಡ್ತಾದೋ ಹಾಗೂ ಶ್ರೀಮತಿ ಮಾಲಿನಿ ಇವರ ಉತ್ತಮ ನಿರೂಪಣೆಯೊಂದಿಗೆ ಮೂಡಿಬಂದಿದ್ದು ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಗೊಂಡಿತು.

Leave a Reply

Your email address will not be published. Required fields are marked *

error: Content is protected !!