September 30, 2026

ನಾಪತ್ತೆಯಾಗಿದ್ದ ನವ ವಿವಾಹಿತೆಯ ಮೃತದೇಹ ಕೆರೆಯಲ್ಲಿ ಪತ್ತೆ

0
image_editor_output_image839105619-1790709320811

ಹಾಸನ: ನಾಪತ್ತೆಯಾಗಿದ್ದ ನವವಿವಾಹಿತೆ ಪ್ರಿಯಾಂಕಾ ಅವರ ಮೃತದೇಹ ಬರೋಬ್ಬರಿ 11 ದಿನಗಳ ಸುದೀರ್ಘ ಶೋಧದ ಬಳಿಕ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಸೆಪ್ಟೆಂಬರ್ 19ರ ರಾತ್ರಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಪತಿ ರಾಜಶೇಖರ ಜೊತೆ ತೆರಳುತ್ತಿದ್ದಾಗ ಪ್ರಿಯಾಂಕಾ ಏಕಾಏಕಿ ಹೇಮಾವತಿ ನಾಲೆಗೆ ಜಿಗಿದಿದ್ದರು ಎಂದು ಹೇಳಲಾಗಿತ್ತು.

ಅಂದಿನಿಂದಲೂ ಕಾಲುವೆಯ ನೀರು ಸ್ಥಗಿತಗೊಳಿಸಿ, ಸುರಂಗ ಹಾಗೂ ನಾಲೆ ನೀರು ಹರಿಯುವ ವಿವಿಧ ಕೆರೆಗಳಲ್ಲಿ ಸಂಬಂಧಿಕರು ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ತುರುವೇಕೆರೆ ಹಾಗೂ ತಿಪಟೂರು ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮೆರಾಗಳನ್ನೂ ಬಳಸಿ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಕೋಲಾಳ ಕೆರೆಯಲ್ಲಿ ಆಕೆಯ ಶವ ತೇಲುತ್ತಿರುವುದು ಕಂಡುಬಂದಿದೆ.

 

Leave a Reply

Your email address will not be published. Required fields are marked *

error: Content is protected !!