ಮೂಲರಪಟ್ಣ 80 ನೆಯ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಚೆಕ್ ಹಸ್ತಾಂತರ
ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮೌಲಾನಾ ಆಝಾದ್ ಮಾದರಿ ಶಾಲೆ ಮೂಲರಪಟ್ಣ ಇದರ ವತಿಯಿಂದ 80 ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಚೆಕ್ ಹಸ್ತಾಂತರ
ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಿಹಾಬುದ್ದೀನ್ ಅಬ್ದುಲ್ಲಾ ಇವರು ವಹಿಸಿದರು.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಜಿ. ಏಚ್ ಎಂ ಫೌಂಡೇಶನ್(ರಿ) ಇದರ ಗೌರವ ಸಲಹೆಗಾರರು ಜ! ಎಂ ಬಿ ಅಶ್ರಫ್ ಮೂಲರಪಟ್ಣ ಇವರ ವತಿಯಿಂದ
ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಾಗೂ ಚೆಕ್ ವಿತರಣೆ ಮಾಡಲಾಯಿತು.
ಮೌಲಾನಾ ಆಝಾದ್ ಮಾದರಿ ಶಾಲೆ ಮೂಲರಪಟ್ಣ ಇದರ ಸಹಶಿಕ್ಷಕ ಶ್ರೀ ಭರತ್ ಇವರು ತನ್ನ ವಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಜಿ. ಏಚ್ ಎಂ ಫೌಂಡೇಶನ್ ಇದರ ಗೌರವಾನ್ವಿತ ಅಧ್ಯಕ್ಷರಾದ ಜ! ಎಂ. ಬಿ ಇಸ್ಮಾಯಿಲ್ ಶಾಫಿ , ಸಂಶುದ್ದೀನ್ ಅರಳ ,ಹಾಗೂ ಪ್ರಮುಖರಾದ ಸಜೀವುದೀನ್ ಎಂ. ಎಸ್, ಹಂಝ ಗುತ್ತು, ಮೊಹಮ್ಮದ್ ಶಾಲಿ ಎಂ. ಎಸ್, ಮುನೀರ್ ಎಂ, ಶಾರುಕ್ ಎಂ ಬಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರೂಗಳಾದ ಎಂ. ಪಿ ಅಬ್ದುಲ್ ಜಬ್ಬಾರ್, ಮಹಮ್ಮದ್ ರಫೀಕ್, ಅಬ್ದುಲ್ ಸಮದ್ ಅರಳ ಹಿರಿಯರಾದ ಸೇಕಬ್ಬ ಎಂ. ಎಸ್, ಮೊಹಮ್ಮದ್ ಎಂ, ಇಬ್ರಾಹಿಂ ಅಜಾದ್ನಗರ, ಹಂಝ ಎಸ್, ಉಸ್ಮಾನ್ ಎಂ.ಪಿ ಆಝಾದ್ ಲಯನ್ಸ್ ಇದರ ಅಧ್ಯಕ್ಷರಾದ ಆಶ್ರಫ್ ( ಸಕಲೇಶಪುರ ) ಶಾಲಾ ಶಿಕ್ಷಕರು, ಪೋಷಕರು
ಮುಂತಾದವರು ಉಪಸ್ಥಿತರಿದ್ದರು.
ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ರೀನಾ ಫರ್ನಾಂಡೀಸ್ ಅತಿಥಿಗಳನ್ನೆಲ್ಲಾ ಸ್ವಾಗತಿಸಿದರು.
ಸಹಶಿಕ್ಷಕಿ ಮಿಶ್ರಿಯಾ ಭಾನು ಕಾರ್ಯಕ್ರಮ ನಿರೂಪಿಸಿದರು.
ಮೌಲಾನಾ ಆಜಾದ್ ಮಾದರಿ ಶಾಲೆ ಮೂಲರಪಟ್ಣ ಇದರ ಮುಖ್ಯ ಶಿಕ್ಷಕಿ ಸುಪ್ರೀತಾ ಎಂ ಇವರು ವಂದಿಸಿದರು.




