August 15, 2026

ವಿಟ್ಲ: ಆ.16ರಂದು ದಾರುನ್ನಜಾತ್ ವಿದ್ಯಾಸಂಸ್ಥೆಯ  ವಾರ್ಷಿಕೋತ್ಸವ ಮತ್ತು ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 7ನೇ ಆಂಡ್ ನೇರ್ಚೆ

0
image_editor_output_image-1726184911-1786794346057

ವಿಟ್ಲ: ಕೊಡಂಗಾಯಿ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಶಿಲ್ಪಿ, ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 7ನೇ ಆಂಡ್ ನೇರ್ಚೆ ಆಗಸ್ಟ್  16ರಂದು  ಭಾನುವಾರ ನಡೆಯಲಿದೆ.
16 ರಂದು ಭಾನುವಾರ ಬೆಳಿಗ್ಗೆ  ಖತಮುಲ್ ಕುರಾನ್, ಬಳಿಕ  ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.


12 ಗಂಟೆಗೆ ಶೈಖುನಾ ಅಬೂಬಕ್ಕರ್ ಉಸ್ತಾದ್ ಅನುಸ್ಮರಣೆ ಸಮಾರೋಪ ಕಾರ್ಯಕ್ರಮದಲ್ಲಿ ಶೈಖುನಾ ಮುತ್ತಣ್ಣೂರು ತಂಙಳ್. ಶಹೀರ್ ತಂಙಳ್ ಪೂ
ಪೊಸೋಟ್. ಶೈಖುನಾ ಓಲೆ ಮುಂಡೋವು ಉಸ್ತಾದ್. ಸಯ್ಯದ್ ಪೂಕುಂಇಿ ತಂಙಳ್ ಶಿಹಾಬುದ್ದೀನ್ ತಂಙಳ್. ರಫೀಕ್ ಸಅದಿ . ಮಹಮ್ಮದ್ ಅಲಿ ಸಖಾಫಿ ಯುಟಿ ಖಾದರ್ ಹಾಗೂ ಹಲವು ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ  ಯೂಸುಫ್ ಸಾಜ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!