ಹವಾಮಾನ ಮುನ್ಸೂಚನೆ ವರದಿ ವೇಳೆ ಪೋರ್ನ್ ವೀಡಿಯೊ ಪ್ರಸಾರ ಮಾಡಿದ ಟಿವಿ ಚಾನಲ್:
ವೀಕ್ಷಕರಲ್ಲಿ ಕ್ಷಮೆಯಾಚನೆ
ವಾಷಿಂಗ್ಟನ್: ಸ್ಪೋಕೆನ್ನಲ್ಲಿರುವ ಸಿಬಿಎಸ್ ಅಂಗಸಂಸ್ಥೆ ಕೆಆರ್ ಇಎಂ ಸಂಜೆ ಸುಮಾರು 6:00 ಗಂಟೆ ಸಮಯದಲ್ಲಿ ಹವಾಮಾನ ಮುನ್ಸೂಚನೆ ವರದಿಯನ್ನು ಪ್ರಸಾರದ ವೇಳೆ ಇದ್ದಕ್ಕಿದ್ದಂತೆ 13 ಸೆಕೆಂಡುಗಳ ಪೋರ್ನ್ ವಿಡಿಯೋ ಟಿವಿ ಸ್ಕ್ರೀನ್ ಮೇಲೆ ಏಕಾಏಕಿ ಪ್ರಸಾರವಾಗಿದೆ.
ಹವಾಮಾನ ಶಾಸ್ತ್ರ ತಜ್ಞೆ ಮಿಶೆಲ್ ಬಾಸ್, ವೀಕ್ಷಕರಿಗೆ ರಾಜ್ಯದ ವಾತಾವರಣದ ವರದಿಯನ್ನ ವಿವರಣೆ ನೀಡುತ್ತಾ ಇದ್ದರು. ಈ ವೇಳೆ ಇದ್ದಕ್ಕಿದ್ದಂತೆ 13 ಸೆಕೆಂಡುಗಳ ಕಾಲ ಟಿವಿ ಸ್ಕ್ರೀನ್ ಮೇಲೆ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ.
ಇತ್ತ ಹವಾಮಾನದ ವರದಿಯನ್ನು ನೀಡುತ್ತಿದ್ದ ಹವಾಮಾನ ಶಾಸ್ತ್ರ ತಜ್ಞೆ ಮಿಶೆಲ್ ಬಾಸ್ ಗೆ ಟಿವಿ ಸ್ಕ್ರೀನ್ ಮೇಲೆ ಏನಾಗುತ್ತಿದೆ ಅಂತ ಅರಿವು ಇರಲಿಲ್ಲ. ಹೀಗಾಗಿ ತಮ್ಮ ಪಾಡಿಗೆ ತಾವು ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಇನ್ನು ಹವಾಮಾನದ ವರದಿ ಪ್ರಸಾರವಾಗುವ ವೇಳೆಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದಕ್ಕೆ ಕೆಆರ್ಇಎಂ ಚಾನೆಲ್ 11 ಗಂಟೆಯ ಸುದ್ದಿ ಪ್ರಸಾರದ ವೇಳೆ, ವೀಕ್ಷಕರಲ್ಲಿ ಕ್ಷಮೆಯಾಚಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಜಾಗರೂಕತೆಯಿಂದ ಇರುವುದಾಗಿ ವಾಹಿನಿ ಭರವಸೆಯನ್ನು ನೀಡಿದೆ.
ಇನ್ನು ಟಿವಿ ಸ್ಕ್ರೀನ್ ಮೇಲೆ 13 ಸೆಕೆಂಡುಗಳ ಕಾಲ ಅಶ್ಲೀಲ ವೀಡಿಯೋ ಪ್ರಸಾರವಾಗಿರುವ ಬಗ್ಗೆ ಸ್ಪೋಕನ್ ನಗರ ಪೊಲೀಸರಿಗೆ ಹಲವು ಜನರು ಕರೆ ಮಾಡಿ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಸ್ಪೋಕನ್ ನಗರ ಪೊಲೀಸರು, ತನಿಖೆ ಆರಂಭಿಸಿದ್ದಾರೆ.





