ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ತುಮಕೂರು ನಗರ ಬಂದ್

ತುಮಕೂರು: ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ ತುಮಕೂರು ನಗರ ಬಂದ್ ಮಾಡಲಾಯಿತು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಜಂಟಿಯಾಗಿ ಬಂದ್‌ಗೆ ಕರೆ ನೀಡಿವೆ. ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ವಾಣಿಜ್ಯ ವಹಿವಾಟು ಬಹುತೇಕ ಬಂದ್ ಆಗಿದ್ದು, ವಾಹನಗಳ ಸಂಚಾರ ವಿರಳವಾಗಿತ್ತು. ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನ ಸಂಚಾರ ಕಡಿಮೆ ಇತ್ತು.
ಹೊರಗಡೆಯಿಂದ ಬಂದು ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದರೆ, ನಗರ ಸಾರಿಗೆ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಶಾಲಾ, ಕಾಲೇಜುಗಳು ಮುಚ್ಚಿವೆ. ಬೆಳಿಗ್ಗೆ ಅಂಗಡಿಗಳು, ಹೋಟೆಲ್‌ಗಳನ್ನು ತೆರೆಯದಂತೆ ಮುಚ್ಚಿಸಲಾಯಿತು.