February 4, 2026

ಮಾಜಿ ಗ್ರಾಪಂ ಅಧ್ಯಕ್ಷನನ್ನು ಮಚ್ಚಿನಲ್ಲಿ ಹೊಡೆದು ಹತ್ಯೆ

0
image_editor_output_image-423858822-1704950586850.jpg

ಬೀದರ್: ಜಮೀನಿಗೆ ಹೋಗುವ ದಾರಿಗೆ ಕಲ್ಲು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾಜಿ ಗ್ರಾಪಂ ಅಧ್ಯಕ್ಷನನ್ನು ಮಚ್ಚಿನಲ್ಲಿ ಹೊಡೆದು ಹತ್ಯೆಗೈದ ಘಟನೆ ಚಿಟ್ಟಗುಪ್ಪದ ನಿರ್ಣಾ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ್ (46) ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಈ ವೇಳೆ ಅವರ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕ್ರಿಕೆಟ್ ಆಡುತ್ತಿದ್ದ ಟೆಕ್ಕಿ ಹೃದಯಾಘಾತದಿಂದ ಸಾವು

ಗ್ರಾಮದ ಲಿಂಗರಾಜು, ಕಾಶಿನಾಥ್, ಜಗನಾಥ್ ಸೇರಿದಂತೆ ಒಟ್ಟು 8 ರಿಂದ 9 ಜನ ಸೇರಿ ಮಾರಕಾಸ್ತ್ರಗಳಿಂದ ಮಲ್ಲಿಕಾರ್ಜುನ್ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ.

ಪರಿಣಾಮ ಗಂಭೀರವಾಗಿ ಗಾಯಗೊಂಡ ಮಲ್ಲಿಕಾರ್ಜುನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!