ಜೂನ್ 20 ರಂದೇ ಮಣ್ಣು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು ಕೇರಳ ಸಿಎಂ ಸತೀಶನ್
ವಯನಾಡ್: ಸುರಂಗ ರಸ್ತೆ ನಿರ್ಮಾಣ ಪ್ರದೇಶದಿಂದ ಮಣ್ಣು ತೆಗೆಯಲು ಜೂನ್ 20 ರಂದೇ ಗುತ್ತಿಗೆದಾರರಿಗೆ ಆದೇಶ ಹೊರಡಿಸಲಾಗಿತ್ತು. ಆದ್ರೆ ಅವರು ನಿಯಮ ಪಾಲಿಸದ ಕಾರಣ ಭೂಕುಸಿತ ಸಂಭವಿಸಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್ ಹೇಳಿದ್ದಾರೆ.
ಮೆಪ್ಪಾಡಿ ಭೂಕುಸಿತ ದುರಂತದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಸತೀಶನ್, ಮೀನಂಗಡಿಯ, ಕೋಝಿಕ್ಕೋಡ್‌ನ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ. ಸುರಂಗ ರಸ್ತೆಯ ಬಳಿ ಉಂಟಾದ ಭೂಕುಸಿತದಲ್ಲಿ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಒಬ್ಬರು ಸಾವನ್ನಪ್ಪಿದ್ದಾರೆ, 7 ಜನ ಕಾಣೆಯಾಗಿದ್ದಾರೆ. 7 ಮಂದಿಯನ್ನ ರಕ್ಷಣೆ ಮಾಡಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸುರಂಗ ರಸ್ತೆ ನಿರ್ಮಾಣ ಪ್ರದೇಶದಿಂದ ಮಣ್ಣನ್ನ ತೆಗೆಯಲು ಗುತ್ತಿಗೆದಾರರಿಗೆ ಜೂನ್ 20 ರಂದೇ ಹೇಳಲಾಗಿತ್ತು. ವಿಪತ್ತು ನಿರ್ವಹಣಾ ಇಲಾಖೆ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಈ ಸಂಬಂಧ ಆದೇಶ ಹೊರಡಿಸಿದ್ದರು. ಲೋಕೋಪಯೋಗಿ ಇಲಾಖೆ ಸಚಿವರೂ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು. ಆದ್ರೆ ಗುತ್ತಿಗೆದಾರರು ಆದೇಶ ಪಾಲಿಸಿಲ್ಲ. ಇದರ ಪರಿಣಾಮ ಇಂದು ದುರಂತ ಸಂಭವಿಸಿದೆ ಎಂದು ವಿವರಿಸಿದ್ದಾರೆ.
ಈವರೆಗೆ ವಯನಾಡ್‌ನ ಈ ಪ್ರದೇಶದಲ್ಲಿ 225 ಸೆಂ.ಮೀಟರ್ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ 265 ಮಿ.ಮಿ. ಮಳೆಯಾಗಿದೆ. ಸ್ಥಳದಲ್ಲಿ 8 ಎಸ್ಕಲೇಟರ್‌ಗಳಿವೆ. ಇದನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಇದು ದುರದೃಷ್ಟಕರ ದುರಂತ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.




