ವಿಟ್ಲ: ಕೇಂದ್ರ ಜುಮಾ ಮಸೀದಿ ವತಿಯಿಂದ SIR ಮಾಹಿತಿ
ವಿಟ್ಲ ಕೇಂದ್ರ ಜುಮಾ ಮಸೀದಿ ವತಿಯಿಂದ BLO ಅಧಿಕಾರಿ ಅಬ್ದುಲ್ ರಹಿಮಾನ್ ಸಾಹೇಬ್ ರವರಿಂದ SIR ಬಗ್ಗೆ ಮಾಹಿತಿ ನೀಡಲಾಯಿತು.
SIR ಬಗೆಗಿನ ಗೊಂದಲಗಳಿಗೆ ಪರಿಹಾರ ನೀಡುವ ಮಾಹಿತಿ ಕೊಟ್ಟ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಮಸೀದಿ ಖತೀಬ್ ಆರಿಫ್ ಬಾಖವಿ ದುವಾ ನೆರವೇರಿಸಿದರು.
ಈ ಸಂದರ್ಭ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಕಾರ್ಯದರ್ಶಿ ಅಬೂಬಕರ್ ನೋಟರಿ,ಟ್ರಸ್ಟಿಗಳಾದ ಝುಬೈರ್ ಮಾಸ್ಟರ್, ಅಬ್ದುಲ್ ರಹಿಮಾನ್ ದೀಪಕ್,ಮುಅದ್ಸಿನ್ ಅಬ್ದುಲ್ ಹಕೀಂ ಅರ್ಷದಿ,ಅಬೂಬಕರ್ ಮದನಿ ಮುಂತಾದವರು ಉಪಸ್ಥಿತರಿದ್ದರು.
ಮಸೀದಿ ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ವಂದಿಸಿದರು.




