ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ನಿಷೇಧಿತ ತಂಬಾಕು ಜಪ್ತಿ: ಓರ್ವ ಆರೋಪಿಯ ಸೆರೆ
ಕಾಸರಗೋಡು: ಆಪರೇಷನ್ ತೂಫಾನ್’ ಅಂಗವಾಗಿ ಪೊಲೀಸ್ ನಡೆಸಿದ ದಾಳಿಯಲ್ಲಿ ಮಧೂರು ಪಟ್ಲದಿಂದ ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಸಹಿತ ಓರ್ವನನ್ನು ಬಂಧಿಸಲಾಗಿದೆ. ಮಧೂರು ಪಟ್ಲ ದ ಕೆ. ಇಬ್ರಾಹಿಂ ಬಾತ್ಷಾ (36) ಬಂಧಿತ ಆರೋಪಿ.
ನಿಷೇಧಿತ ಪಾನ್ ಮಸಾಲ, ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಮಾರಾಟದಿಂದ ಬಂದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಟ್ಲ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಕಾರು ಪೊಲೀಸರ ಗಮನಕ್ಕೆ ಬಂದಿದೆ.
ಕಾರಿನ ಗ್ಲಾಸ್ ಗಮನಿಸಿದಾಗ ಪ್ಲಾಸ್ಟಿಕ್ ಚೀಲಗಳು ಇರುವುದು ಕಂಡುಬಂದಿದ್ದು, ಸಂಶಯ ಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ‘ಆಪರೇಷನ್ ತೂಫಾನ್’ ವಿಶೇಷ ಕಾರ್ಯಾಚರಣೆಯಂಗವಾಗಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ತಂಬಾಕು ಉತ್ಪನ್ನ ಪತ್ತೆಯಾಗಿದೆ.




