904 ಕೋಟಿ ರೂ. ವಂಚನೆ ಪ್ರಕರಣ: ಬಿಗ್ ಬಜಾರ್ ಮಾಲಕನ ವಿರುದ್ಧ FIR ದಾಖಲು
ಮುಂಬೈ: ದೇಶದ ಪ್ರಸಿದ್ಧ ರಿಟೇಲ್ ಮಳಿಗೆಯಾದ ‘ಬಿಗ್ ಬಜಾರ್’ ರೂವಾರಿ ಹಾಗೂ ಫ್ಯೂಚರ್ ಗ್ರೂಪ್ ಮುಖ್ಯಸ್ಥ ಕಿಶೋರ್ ಬಿಯಾಧಿ ವಿರುದ್ಧ ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಆರೋಪದಡಿ ಕೇಂದ್ರ ತನಿಖಾ ದಳ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ತೀವ್ರಗೊಳಿಸಿದೆ.
ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮರುಪಾವತಿಸದೆ ನಿಯಮಗಳನ್ನು ಉಲ್ಲಂಘಿಸಿರುವುದು ಹಾಗೂ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಫ್ಯೂಚರ್ ಗ್ರೂಪ್ ಸಂಸ್ಥೆಗಳು ವಿವಿಧ ಕನ್ಸೋರ್ಟಿಯಂ ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲದ ಮೊತ್ತ ಬಡ್ಡಿ ಸಮೇತ ಒಟ್ಟು ₹೯೦೪ ಕೋಟಿಗಳಿಗೂ ಅಧಿಕ ವಂಚನೆಯಾಗಿದೆ ಎಂದು ದೂರಲಾಗಿದೆ.
ಪ್ರಮುಖ ಬ್ಯಾಂಕ್‌ಗಳ ಒಕ್ಕೂಟ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಕಿಶೋರ್ ಬಿಯಾಧಿ ಸೇರಿದಂತೆ ಇತರ ಸಂಬಂಧಿತ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಲ ಮರುಪಾವತಿ ವೈಫಲ್ಯ ಹಾಗೂ ಹಣಕಾಸು ವ್ಯವಹಾರಗಳಲ್ಲಿನ ಅಕ್ರಮಗಳ ಕುರಿತು ಸಿಬಿಐ ತಂಡ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ.
ದೇಶದ ರಿಟೇಲ್ ರಂಗದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದ ಫ್ಯೂಚರ್ ಗ್ರೂಪ್ ಮತ್ತು ಕಿಶೋರ್ ಬಿಯಾಧಿ ವಿರುದ್ಧ ಸಿಬಿಐ ದಾಖಲಿಸಿರುವ ಈ ಬೃಹತ್ ಮೊತ್ತದ ವಂಚನೆ ಪ್ರಕರಣವು ಕಾರ್ಪೊರೇಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಈ ಪ್ರಕರಣದಲ್ಲಿ, ಕಿಶೋರ್ ಬಿಯಾನಿ ಅವರ ಸಹೋದರ ರಾಕೇಶ್ ಬಿಯಾನಿ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈನಲ್ಲಿರುವ ‘ಸ್ಟ್ರೆಸ್ಡ್ ಅಸೆಟ್ಸ್ ಮ್ಯಾನೇಜ್‌ಮೆಂಟ್ ಬ್ರಾಂಚ್-III’ ನೀಡಿದ ದೂರಿನ ಮೇರೆಗೆ, ಸಿಬಿಐ ಪ್ರಕರಣ ದಾಖಲಿಸಿದೆ.




