ಬೆಳ್ಳಾರೆ: POCSO ACT ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ವಶಕ್ಕೆ
ಬೆಳ್ಳಾರೆ: POCSO ACT ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳಂಜ ಗ್ರಾಮ, ಸುಳ್ಯ ನಿವಾಸಿ ರಾಜೇಶ ಬಂಧಿತ ಆರೋಪಿ.
ಬೆಳ್ಳಾರೆ ಠಾಣಾ ಪಿಎಸ್ಐ ಅಶೋಕ್ ಸಿ ಎಮ್ ಹಾಗೂ ಸಿಬ್ಬಂದಿಗಳಾದ ಪ್ರವೀಣ ಬಾರ್ಕಿ ಮತ್ತು ಸಂತೋಷ್ ಕೆ ಜಿ ರವರುಗಳು ಕಳಂಜ ಗ್ರಾಮದ ಕಿಲಂಗೋಡಿ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.





