ಬಂಟ್ವಾಳ: ಬಿ ಸಿ ರೋಡು ಬಸ್ ನಿಲ್ದಾಣದಲ್ಲಿ ಪಿಕ್ ಪಾಕೆಟ್: ಮಹಿಳೆಯ ಬ್ಯಾಗ್ ನಿಂದ ನಗದು ಕಳವು
ಬಂಟ್ವಾಳ: ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಪಿಕ್ ಪಾಕೆಟ್ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಮಹಿಳೆಯೋರ್ವಳ ಬ್ಯಾಗ್ ನಿಂದ ಸಾವಿರಾರು ರೂ ನಗದು ಕಳವು ಮಾಡಿದ ಘಟನೆ ನಡೆದಿದೆ
ಬೊಳಿಯಾರು ನಿವಾಸಿ ಪ್ರೇಮ ಎಂಬವರ ಬ್ಯಾಗ್ ನಿಂದ ಸುಮಾರು 4 ಸಾವಿರ ರೂ ನಗದು ಕಳವು ಮಾಡಿದ್ದಾರೆ.
ಪ್ರೇಮ ಅವರು ಬೊಳಿಯಾರಿನಿಂದ ಧರ್ಮಸ್ಥಳ ಕಡೆಗೆ ಹೊರಟಿದ್ದರು. ಬೋಳಿಯಾರಿನಿಂದ ಬಿಸಿರೋಡಿಗೆ ಬಂದಿಳಿದು ಬಳಿಕ ಧರ್ಮಸ್ಥಳ ಬಸ್ ಗೆ ಹತ್ತುವ ವೇಳೆ ಬ್ಯಾಗ್ ನಿಂದ ಹಣವನ್ನು ಕಳವು ಮಾಡಿದ್ದಾರೆ.
ಪ್ರೇಮ ಅವರು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಬಸ್ ಹತ್ತುವ ವೇಳೆ ಕಳವು ಮಾಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.





