February 3, 2026

ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಕೋಳಿ ಅಂಕದ ವಿಚಾರದಲ್ಲಿ ಈಗ ಎಲ್ಲಿದ್ದಾರೆ?: ಶಾಸಕ ಅಶೋಕ್ ರೈ

0
image_editor_output_image551669651-1770111683978.jpg

ಪುತ್ತೂರು: ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಕೋಳಿ ಅಂಕದ ವಿಚಾರದಲ್ಲಿ ಈಗ ಎಲ್ಲಿದ್ದಾರೆ. ಎಲ್ಲರೂ ಬರಬೇಕಿತ್ತಲ್ಲಾ ಎಂದು ಶಾಸಕ ಅಶೋಕ್ ರೈ ಪ್ರಶ್ನಿಸಿದರು.

ತುಳುನಾಡ ಆಚರಣೆ, ಸಂಪ್ರದಾಯ ಉಳಿವಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯು ಕೊಟೆಚಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ದೇವಸ್ಥಾನ, ದೈವಸ್ಥಾನಗಳ ಉತ್ಸವಗಳ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಕೋಳಿ ಅಂಕ ನಡೆದು ಬಂದಿದೆ. ಆದರೆ ಹಿಂದುತ್ವದ ಬಗ್ಗೆ ಮಾತನಾಡುವವರು ಯಾರು ಬಂದಿಲ್ಲ. ಜೂಜು ರಹಿತ ಸಾಂಪ್ರದಾಯಿಕ ಕೋಳಿ ಅಂಕ ಹೋರಾಟಕ್ಕೆ ಬರುವಂತೆ ಅವಿಭಜಿತ ಜಿಲ್ಲೆಯ 13 ಮಂದಿ ಶಾಸಕರ ಬಾಗಿಲು ಬಡಿಯಿರಿ. ಕೋಳಿ ಅಂಕ ವಿಚಾರವಾಗಿ ಅಧಿವೇಶನದಲ್ಲಿ ನಾನು ಪ್ರಸ್ತಾಪಿಸುವೆ. ನನಗೆ ಯಾರ ಹೆದರಿಕೆಯೂ ಇಲ್ಲ ಎಂದು ಅವರು ಹೇಳಿದರು

Leave a Reply

Your email address will not be published. Required fields are marked *

error: Content is protected !!