February 4, 2026

ಬ್ರೇಕ್ ಫೇಲ್ಯೂರ್ ಆಗಿ ರೈಲ್ವೆ ಹಳಿ  ಮೇಲೆ ನಿಂತ ಸಿಮೆಂಟ್ ಬಲ್ಕರ್ ಲಾರಿ

0
image_editor_output_image242622528-1704950950300.jpg

ಚಿಕ್ಕಬಳ್ಳಾಪುರ: ಬ್ರೇಕ್ ಫೇಲ್ಯೂರ್ ಆಗಿ ಸಿಮೆಂಟ್ ಬಲ್ಕರ್ ಲಾರಿಯೊಂದು ರೈಲ್ವೆ ಹಳಿ ಮೇಲೆ ಅಡ್ಡಲಾಗಿ ನಿಂತ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಬಿಬಿ ರಸ್ತೆಯ ಅಪ್ಪಾಲು ಪೆಟ್ರೋಲ್ ಬಂಕ್ ಹಿಂಭಾಗ ನಡೆದಿದೆ.

ಬೆಂಗಳೂರು ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಬರುತ್ತಿದ್ದ ಲಾರಿ ಇಳಿಜಾರಿನಲ್ಲಿ ಬ್ರೇಕ್ ಫೇಲ್ಯೂರ್ ಆಗಿದ್ದು, ಚಾಲಕ ರವಿ ಕೂಡಲೇ ಎಡಬದಿಗೆ ಎಳೆದುಕೊಂಡಿದ್ದಾರೆ. ಇದರಿಂದ ಲಾರಿ ಪೆಟ್ರೋಲ್ ಬಂಕ್ ಹಾಗೂ ಟಾಟಾ ಶೋ ರೂಂ ಪಕ್ಕದ ಖಾಲಿ ಜಾಗದಲ್ಲಿ ನುಗ್ಗಿ ರೈಲ್ವೆ ಹಳಿ ಮೇಲೆ ನಿಂತಿದೆ.

ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲು ಸಜ್ಜಾಗಿ ನಿಂತಿದ್ದ ಪ್ಯಾಸೆಂಜರ್ ರೈಲು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

You may have missed

error: Content is protected !!