February 4, 2026

ಕಾಸರಗೋಡು: ಟೆಂಪೋದಲ್ಲಿ ಸಾಗಿಸುತ್ತಿದ್ದ ಬಿದಿರು ತಾಗಿ ಮಗುಚಿ ಬಿದ್ದ ಬೈಕ್: ಸವಾರ ಮೃತ್ಯು, ಸಹ ಸವಾರ ಗಂಭೀರ

0
IMG-20230610-WA0052.jpg

ಕಾಸರಗೋಡು: ಟೆಂಪೋದಲ್ಲಿ ಸಾಗಿಸುತ್ತಿದ್ದ ಬಿದಿರಿಗೆ ತಾಗಿದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಮಗುಚಿದ ಪರಿಣಾಮ ಸವಾರ ಮೃತಪಟ್ಟ ದಾರುಣ ಘಟನೆ ಕುಂಡಂಗುಳಿ ಮೂನಾಂಕಡವು ಸಮೀಪ ಶುಕ್ರವಾರ ಸಂಜೆ ನಡೆದಿದೆ.

ಪೆರಿಯ ಕೂಡಾನ ದ ಶಂಭು ಕುಮಾರ್ (43) ಮೃತ ಪಟ್ಟವರು. ಸಹ ಸವಾರ ಕುಂಡಂಗುಳಿಯ ಸತೀಶ್ (20) ಗಾಯಗೊಂಡಿದ್ದಾರೆ.

ಕುಂಡಂಗುಳಿಯಿಂದ ಮೂನಾಂಕಡವು ಕಡೆಗೆ ತೆರಳುತ್ತಿದ್ದಾಗ ಬೈಕನ್ನು ಹಿಂದಿಕ್ಕಿ ಮುಂದೆ ಸಾಗಿದ ಟೆಂಪೋ ಒಮ್ಮೆಲೆ ಬ್ರೇಕ್ ಹಾಕಿದಾಗ ಬಿದಿರು ಬೈಕ್ ಗೆ ತಗಳಿ ಮಗುಚಿ ಬಿದ್ದು, ಇಬ್ಬರು ರಸ್ತೆಗೆಸೆಲ್ಪಟ್ಟಿದ್ದು, ಗಂಭೀರ ಗಾಯಗೊಂಡ ಶಂಭು ಕುಮಾರ್ ರವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟರು.

ಇನ್ನು ಅಪಘಾತಕ್ಕೆ ಕಾರಣವಾದ ಟೆಂಪೋ ಚಾಲಕನ ವಿರುದ್ಧ ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!