ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಅಭಿನಂದಿಸಿದ ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ, ಉಪನ್ಯಾಸಕರ ಸಂಘ
ಬಂಟ್ವಾಳ: ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘದ ವತಿಯಿಂದ ನೂತನ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪರವರನ್ನು ಅಭಿನಂದಿಸಲಾಯಿತು ಹಾಗೂ ಪ್ರಾಂಶುಪಾಲರ ಸಂಘದ ಡೈರಿಯನ್ನು ಅವರಿಗೆ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಒಪ್ಪಿಗೆಯನ್ನು ನೀಡಿ ಶೀಘ್ರವೇ ಭೇಟಿ ನೀಡುವುದಾಗಿ ಸಂಘದ ನಿಯೋಗಕ್ಕೆ ತಿಳಿಸಿದರು ಹಾಗೂ ಜಿಲ್ಲೆಯ ದ್ವಿತೀಯ ಪಿ.ಯು.ಸಿ.ಯ ಉತ್ತಮ ಫಲಿತಾಂಶಕ್ಕಾಗಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಕೆ.ಎನ್.ಗಂಗಾಧರ ಆಳ್ವ, ಕಾರ್ಯದರ್ಶಿ ಯೂಸುಫ್ ವಿಟ್ಲ, ಉಪಾಧ್ಯಕ್ಷ ವಿಠಲ.ಎ.ಕೋಶಾಧಿಕಾರಿ ಶ್ರೀಮತಿ ಕವಿತಾ, ಉಸನ್ಯಾಸಕರ ಸಂಘದ ರೂಪಾಕ್ಷ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




