ವಿಟ್ಲ: ಮನೆಯಿಂದ ಕೆಲಸಕ್ಕೆ ಹೊರಟಿದ್ದ ಮಹಿಳೆ ನಾಪತ್ತೆ: ಪತ್ತೆಗಾಗಿ ಕೋರಿಕೆ
ವಿಟ್ಲ: ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ವಿಟ್ಲ ವಲಯದ ಸೇವಾ ಪ್ರತಿ ನಿಧಿಯಾಗಿ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ಎಂಬಲ್ಲಿ ನಡೆದಿದೆ.
ಶ್ರೀದೇವಿ (23) ಕಾಣೆಯಾದ ಮಹಿಳೆ.
ಜೂನ್ 9ರಂದು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ಎಂಬಲ್ಲಿರುವ ತನ್ನ ತಂದೆಯ ಮನೆಯಿಂದ ಬೆಳಿಗ್ಗೆ 11.30 ಗಂಟೆಗೆ ಎಂದಿನಂತೆ ಕೆಲಸಕ್ಕೆ ಹೋಗಿ ಬರುವುದಾಗಿ ವಿಟ್ಲಕ್ಕೆ ಹೋದವರು ಸಂಜೆಯಾದರು ಮನೆಗೆ ಬಾರದೆ ಇದ್ದಾಗ ಶ್ರೀದೇವಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು ಸಂಬಂಧಿಕರಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಿ ಹುಡುಕಕಾಡಿದರು ಮಗಳು ಪತ್ತೆಯಾಗಿಲ್ಲ ಎಂದು ಆಕೆಯ ತಂದೆ ದೂರು ನೀಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




