February 4, 2026

ವಿಟ್ಲ: ವಿವಾಹಿತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

0
IMG-20220615-WA0046

ವಿಟ್ಲ : ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೋಪಾಡಿ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ನಡೆದಿದೆ.

ಮಂಗಳೂರು ತಾಲೂಕು ಯೆಯ್ಯಾಡಿ, ಕೊಂಚಾಡಿ ಕೊಪ್ಪಳ ಕಾಡು ನಿವಾಸಿ ಸುರೇಶ್ ಚೌಟ ಎಂಬವರ ಪುತ್ರಿ ಪ್ರೀತಿ ಶೆಟ್ಟಿ (37) ಮೃತ ಮಹಿಳೆ.

ಸುರೇಶ್‌ ಚೌಟ ಎಂಬವರ ಮಗಳು ಪ್ರೀತಿ ಶೆಟ್ಟಿ ರವರು ತನ್ನ ಮಗುವನ್ನು ಕಳೆದುಕೊಂಡು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಜೂ.9 ರಂದು ತೋಟಕ್ಕೆ ಸಿಂಪಡಿಸಲೆಂದು ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಕಲಾಯಿಗುತ್ತು ಎಂಬ ಮನೆಯಲ್ಲಿ ತಂದಿಟ್ಟಿದ್ದ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ವೇಳೆ ಮೃತಪಟ್ಟಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಟ್ಲ ಠಾಣೆಯಲ್ಲಿ ಕಲಂ:174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!