February 3, 2026

ಕಾಸರಗೋಡು: ನೀರಿನ ಟ್ಯಾಂಕ್ ಸ್ವಚ್ಚಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕ ಮೃತ್ಯು

0
IMG-20230207-WA0041.jpg

ಕಾಸರಗೋಡು: ಮಂಜೇಶ್ವರದಲ್ಲಿ ನೀರಿನ ಟ್ಯಾಂಕ್ ಸ್ವಚ್ಚಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಇಂದು ನಡೆದಿದೆ.

ಮೃತ ಯುವಕನನ್ನು ಮಂಜೇಶ್ವರ ಕರೋಡದ ಫವಾಝ್ (21) ಎಂದು ಗುರುತಿಸಲಾಗಿದೆ.

ಮಂಜೇಶ್ವರ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮೃತರು ಶಾಲೆಯ ಬಸ್ಸಿನ ನೌಕರ ರಾಗಿದ್ದರು. ಶಾಲೆಯ ಕಟ್ಟಡ ಮೇಲೆ ಇರುವ ನೀರಿನ ಟ್ಯಾಂಕ್ ಸ್ವಚ್ಚ ಗೊಳಿಸಲು ಫವಾಝ್ ಮತ್ತು ಇನ್ನೋರ್ವ ಮೇಲಕ್ಕೆರಿದ್ದರು. ಈ ಸಂದರ್ಭದಲ್ಲಿ ಫವಾಝ್ ಕಾಲು ಜಾರಿ ಕೆಳಗೆ ಬಿದ್ದಿದ್ದು, ಕೂಡಲೇ ಶಾಲಾ ಸಿಬಂದಿಗಳು, ನಾಗರಿಕರು ಫವಾಝ್ ನನ್ನು ಆಸ್ಪತ್ರೆ ಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!