ವಿಟ್ಲ: ಅಳಿಕೆ ಶ್ರೀ ಸತ್ಯ ಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಅಳಿಕೆ: ಶ್ರೀ ಸತ್ಯ ಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆ, ಆಳಿಕೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ನೀಟ್, ಜೆಇಇ, ಸಿಇಟಿ, CLAT 2026ರ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.
ಸಂಸ್ಥೆಯ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ಅವರ ಧ್ವಜಾರೋಹಣಗೈದರು.
ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳ ಪರವಾಗಿ ಪ್ರೇಮ್ ಸಾಗರ್ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ ತರಬೇತಿದಾರ ಹಾಗೂ ಹಳೆಯ ವಿದ್ಯಾರ್ಥಿ ಸೂರಜ್ ಕೆ. ಎಲ್. ಅವರು ಆಳಿಕೆಯ ವಿಶಿಷ್ಟ ಶಿಕ್ಷಣ ಪದ್ಧತಿಯನ್ನು ವಿವರಿಸಿ, ಯಶಸ್ಸಿಗೆ 90% ಪರಿಶ್ರಮ, 5% ಅದೃಷ್ಟ ಮತ್ತು 5% ಭಗವಂತನ ಅನುಗ್ರಹ ಅಗತ್ಯವೆಂದು ತಿಳಿಸಿದರು.
ಡಾ. ವಿಕ್ರಮ್ ಶೆಟ್ಟಿ ಅವರು ವಿದ್ಯಾರ್ಥಿಗಳು “I” ಯಿಂದ “We” ಕಡೆಗೆ ಸಾಗಬೇಕು ಹಾಗೂ ಆಳಿಕೆಯ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣದ ಮಹತ್ವವನ್ನು ಅರಿತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮಾಜಿ ಭಾರತೀಯ ಸೇನಾ ಅಧಿಕಾರಿ ಕರ್ನಲ್ ಬಸವರಾಜ್ ಎಸ್. ಘಿವಾರಿ ಅವರು ಸಶಸ್ತ್ರ ಪಡೆಗಳ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಿ, ದೈಹಿಕ ಕ್ಷಮತೆ, ಓದುವ ಅಭ್ಯಾಸ ಹಾಗೂ ಏಕಾಗ್ರತೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್ ಅವರು ಹಿರಿಯರ ತ್ಯಾಗಗಳನ್ನು ಸ್ಮರಿಸಿ, ಯುವಜನತೆ ದೇಶಕ್ಕೆ ಕೊಡುಗೆ ನೀಡಬೇಕು, ಪೋಷಕರನ್ನು ಗೌರವಿಸಬೇಕು ಹಾಗೂ ಮಾತೃಭೂಮಿಯನ್ನು ಆದರಿಸಬೇಕು ಎಂದು ಕರೆ ನೀಡಿದರು.
ಪ್ರೇಮ್ ಸಾಗರ್ ಅವರ ತಾಯಿ ಪೋಷಕರ ಪರವಾಗಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಪಿಯುಸಿ ವಿಭಾಗದ ಪ್ರಾಂಶುಪಾಲ ರಾಮಕೃಷ್ಣ ಪೈ ವಂದಿಸಿದರು. ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶಿವಕುಮಾರ್ ಸ್ವಾಗತಿಸಿದರು.
ಅಕಾಡೆಮಿಕ್ ಡೈರೆಕ್ಟರ್ ಹರಿಪ್ರಸಾದ್ ವಿ. ಎನ್., ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ಪಿಯುಸಿ ಹಾಗೂ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.




