ಬೆಳ್ತಂಗಡಿ : ಉಜಿರೆ ಎಮ್.ಎಸ್.ಎಸ್ ಲಾಡ್ಜ್ ಮೇಲೆ ಪೊಲೀಸ್ ದಾಳಿ: 5 ಯುವತಿಯರು ಸೇರಿ 7 ಮಂದಿ ವಶಕ್ಕೆ
ಬೆಳ್ತಂಗಡಿ : ಉಜಿರೆ ಎಮ್.ಎಸ್.ಎಸ್ ಲಾಡ್ಜ್ ಮೇಲೆ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ನೇತೃತ್ವದಲ್ಲಿ ತಂಡದ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.
ಉಜಿರೆ ಚಾರ್ಮಾಡಿ ರಸ್ತೆಯಲ್ಲಿರುವ ಸುರೇಶ್ ಪೂಜಾರಿ ಎಂಬಾತ ಬಾಡಿಗೆ ಪಡೆದ ಎಮ್.ಎಸ್.ಎಸ್ ಲಾಡ್ಜ್ ಮೇಲೆ ಫೇ.7 ರಂದು ಸಂಜೆ ದಾಳಿ ವೇಳೆ ದಾಖಲೆಗಳಿಲ್ಲದೆ ರೂಂಗಳಲ್ಲಿ ಐದು ಮಂದಿ ಯುವತಿಯರನ್ನು ಮತ್ತು ಇಬ್ಬರು ಲಾಡ್ಜ್ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಬೇಕಾಗಿದೆ.





