July 4, 2026

ವಿಟ್ಲ ಗ್ರಾಮೀಣ ಸಹಕಾರಿ ಸಂಘದ 5ನೇ ಶಾಖೆ ಉಪ್ಪಿನಂಗಡಿ ಉದ್ಘಾಟನೆ: ಸಹಕಾರಿ ರಂಗ ಜನರ ವಿಶ್ವಾಸ ಗಳಿಸಿದ ಕ್ಷೇತ್ರ-ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಸೇವೆ ಶ್ಲಾಘನೀಯ; ಪ್ರತಾಪ ಸಿಂಹ ನಾಯಕ್

0
image_editor_output_image-98824942-1783181884149

ವಿಟ್ಲ: ಸಹಕಾರಿ ರಂಗ ಜನರ ವಿಶ್ವಾಸ ಗಳಿಸಿದ ಕ್ಷೇತ್ರ. ಜನರೊಂದಿಗೆ ಭಾವನಾತ್ಮಕವಾಗಿ ಸಂಬಂಧ ಇಟ್ಟುಕೊಂಡ ಸಂಘಗಳು ಯಶಸ್ವಿ ಪಥದಲ್ಲಿ ಸಾಗುತ್ತವೆ. ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಜನರು ವಿಶ್ವಾಸ ಇಡುವಂತೆ ಸಹಕಾರಿ ಸಂಘಗಳ ನಿರ್ದೇಶಕರ ಮೇಲೂ ನಂಬಿಕೆ ಇಡುತ್ತಾರೆ. ಅದನ್ನು ಉಳಿಸಿಕೊಂಡು ಹೋಗುವುದು ಅತ್ಯಗತ್ಯ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ , ನ್ಯಾಯವಾದಿ ಪ್ರತಾಪ ಸಿಂಹ ನಾಯಕ್
ಹೇಳಿದರು.


ಅವರು ಜು. 4ರ ಶನಿವಾರ ಉಪ್ಪಿನಂಗಡಿಯ ”ರಾಮಗೋಪಾಲ ಕಾಂಪ್ಲೆಕ್ಸ್ ನಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ
೫ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಬೆಳವಣಿಗೆಯನ್ನು ಅವರು ಶ್ಲಾಘಿಸಿದರು.


ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ನೌಕರರ ಪ್ರಾಮಾಣಿಕ ಸೇವೆಯಿಂದ ಕುಟುಂಬ ಮಾತ್ರವಲ್ಲ ಪ್ರತಿ ವ್ಯಕ್ತಿ ಯನ್ನು ತಲುಪುವ ಕೆಲಸ ಸಹಕಾರಿ ಸಂಘಗಳಿಂದ ಆಗಿದೆ. ರೈತನ ಆರ್ಥಿಕ ಪರಿಸ್ಥಿತಿ ಯನ್ನು ಮೇಲೆತ್ತುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಬಹು ದೊಡ್ಡ ಪಾತ್ರ ವಹಿಸಿವೆ ಎಂದು ಹೇಳಿದರು.

ವಿಟ್ಲ ಗ್ರಾಮೀಣ ಸಹಕಾರಿ ಸಂಘ ಒಳಗೊಂಡಂತೆ
ಸಹಕಾರಿ ಸಂಘಗಳು ಇಂದು ಆರ್ಥಿಕ ಶಿಸ್ತು ಮೈಗೂಡಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಿವೆ ಎಂದರು.


ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು ,
ಸಹಕಾರ ಭಾರತಿ ದ. ಕ ಜಿಲ್ಲೆ ಯ ಉಪಾಧ್ಯಕ್ಷ ಹಾಗೂ ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೆ. ವಿ. ಪ್ರಸಾದ್ ಅವರು ಶಾಖೆಯ ಗಣಕೀಕರಣ ಉದ್ಘಾಟಿಸಿದರು.


ರಾಮಗೋಪಾಲ ಕಾಂಪ್ಲೆಕ್ ನಲ್ಲಿ ಕಟ್ಟಡದ ಮಾಲಕ ಕೆ.‌ರಾಜೇಶ್ ನಾಯಕ್ , ಸಂಘದ
ಉಪಾಧ್ಯಕ್ಷ ಮನೋರಂಜನ್ ಕೆ. ಆರ್., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ಕೃಷ್ಣ ಮುರಳಿ ಶ್ಯಾಮ್
ಮತ್ತಿತರರು ಉಪಸ್ಥಿತರಿದ್ದರು.


ನಿರ್ದೇಶಕಿಯರಾದ ಜಯಂತಿ ಎಚ್.ರಾವ್ ಮತ್ತು ಶುಭಲಕ್ಷ್ಮೀ ರಾವ್ ಪ್ರಾರ್ಥನೆ ಹಾಡಿದರು.
ಪ್ರಸ್ತಾವನೆಯೊಂದಿಗೆ ನಿರ್ದೇಶಕ ಮೋಹನ್ ಕೆ. ಎಸ್. ಸ್ವಾಗತಿಸಿದರು.ಉಪಾಧ್ಯಕ್ಷ ಮನೋರಂಜನ್ ಕೆ. ಆರ್. ವಂದಿಸಿದರು. ಮಹೇಶ್ ಕುಮಾರ್ ವಿಟ್ಲ
ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!