August 18, 2026

ಹನೂರು ಶೂಟೌಟ್ ಕೇಸ್: ತಮಿಳುನಾಡು ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

0
IMG-20260818-WA0091

ಚೆನ್ನೈ: ಕರ್ನಾಟಕ ಅರಣ್ಯದಲ್ಲಿ ಆಗಸ್ಟ್ 14ರಂದು ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರು ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ತಮಿಳುನಾಡು ಸರಕಾರ ಪ್ರಸ್ತಾವಿಸಿದೆ ಎಂದು ಅರಣ್ಯ ಸಚಿವ ಆರ್.ವಿ. ರಂಜಿತ್ ಕುಮಾರ್ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು ಎಂದು thehindu.com ವರದಿ ಮಾಡಿದೆ.

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನಿರ್ದೇಶನದಂತೆ ಪರಿಹಾರ ನೀಡುವ ಕುರಿತು ಅರಣ್ಯ ಇಲಾಖೆ ಚರ್ಚೆ ನಡೆಸುತ್ತಿದೆ ಎಂದು ಅವರು ಹೇಳಿದರು. ತಮಿಳುನಾಡು ಕಾನೂನು ಸಚಿವ ಆರ್. ನಿರ್ಮಲ್ ಕುಮಾರ್ ಅವರು ಕೂಡ ಪರಿಹಾರ ನೀಡುವ ಪ್ರಸ್ತಾವನೆಯನ್ನು ಈ ಹಿಂದೆ ದೃಢಪಡಿಸಿದ್ದರು.

ಮರಿಯಮಂಗಲಂ ಅರಣ್ಯ ಪ್ರದೇಶದ ಕರಡಿಕುಟ್ಟದಲ್ಲಿ ಬೇಟೆಯಾಡುವುದನ್ನು ತಡೆಯಲು ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾದಾಗ ಗುಂಡಿನ ದಾಳಿ ನಡೆದಿದೆ ಎಂದು ನಿರ್ಮಲ್ಕುಮಾರ್ ವಿವರಿಸಿದರು.

ಈ ಘಟನೆಯಲ್ಲಿ ʼತಮಿಳುʼ ಮೂಲದವರು ಎನ್ನಲಾದ ಪಿ. ಅಂತೋಣಿಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಮೃತಪಟ್ಟಿದ್ದರು. ಮರಿಯದಾಸ್ ಮತ್ತು ಬೆಂಜಮಿನ್ ಗಾಯಗೊಂಡು ಸ್ಥಳದಿಂದ ತಪ್ಪಿಸಿಕೊಂಡಿದ್ದರು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಹಾಗೂ ಗಾಯಗೊಂಡವರ ಕುಟುಂಬಗಳು ಸುಮಾರು 75 ವರ್ಷಗಳ ಹಿಂದೆ ಕರ್ನಾಟಕಕ್ಕೆ ವಲಸೆ ಹೋಗಿದ್ದವು ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!