August 18, 2026

ಆಟವಾಡುತ್ತಿದ್ದ ಬಾಲಕನ ಮೇಲೆ ಪಿಲ್ಲರ್ ಕುಸಿದು ಸ್ಥಳದಲ್ಲೇ ಮೃತ್ಯು

0
IMG-20260818-WA0092

ತುಮಕೂರು: ಶಾಲೆಯ ಬಳಿ ಇದ್ದ ಹಾಲಿನ ಡೈರಿ ಬಳಿ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಲ್ಲರ್‌ ಬಿದ್ದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿ, ಮತ್ತಿಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಿಳಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಿಳಗಿಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಹೊಂದಿಕೊಂಡಂತೆಯೇ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವಿದ್ದು, ಮಂಗಳವಾರ ಬೆಳಗ್ಗೆ ಶಾಲೆಗೆ ತೆರಳಿದ್ದು ನಾಲ್ಕನೇ ತರಗತಿಯ ಧನುಷ್ ಡೈರಿ ಬಳಿ ಆಟವಾಡುತಿದ್ದ ವೇಳೆ ಏಕಾಎಕಿ ಡೈರಿಯ ಪಿಲ್ಲರ್ ಗೋಡೆ(ಕಬ್ಬಿಣದ ಸರಳುಗಳಿಲ್ಲದ ಇಟ್ಟಿಗೆ ಪಿಲ್ಲರ್) ಏಕಾಎಕಿ ದನುಷ್‍ನ ತಲೆ ಮೇಲೆ ಬಿದ್ದಿದೆ. ಇದರಿಂದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನನ್ನು ಕಳೆದುಕೊಂಡು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಸಹಪಾಠಿಗಳು ಸಹ ಕಣ್ಣಿರು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!