June 15, 2024

ಪ್ರತೀ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್‌ನವೀಕರಣ ಮಾಡಬೇಕು -ಕೇಂದ್ರ ಸೂಚನೆ

0

ನವದೆಹಲಿ: ಆಧಾರ್‌ ಕಾರ್ಡ್‌ ದಾಖಲಾತಿ ಮಾಡಿದ ದಿನಾಂಕದಿಂದ ಪ್ರತೀ ಹತ್ತು ವರ್ಷಗಳಿಗೊಮ್ಮೆ ದಾಖಲೆಗಳನ್ನು ನವೀಕರಣ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಆಧಾರ್ ನಿಯಮಗಳಿಗೆ ಕೇಂದ್ರವು ತಿದ್ದುಪಡಿ ತಂದಿದ್ದು, ಈ ತಿದ್ದುಪಡಿ ಪ್ರಕಾರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್‌ ದಾಖಲೆಗಳನ್ನು ತಿದ್ದುಪಡಿ ಮಾಡಬೇಕೆಂದು ಕಾರ್ಡ್‌ದಾರರಿಗೆ ಸೂಚಿಸಿದೆ.

ಇನ್ನು ಗುರುತಿನ ಪುರಾವೆ, ವಿಳಾಸ ಪುರಾವೆ ದಾಖಲೆಗಳನ್ನು ನವೀಕರಣ ಮಾಡುವುದು ಅಗತ್ಯವಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ ಆಧಾರ್ ಸಂಬಂಧಿತ ಮಾಹಿತಿಗಳ ಸತ್ಯಾಸತ್ಯತೆಗಾಗಿ ಈ ದಾಖಲೆಗಳ ನವೀಕರಣ ಅತ್ಯಗತ್ಯ ಎಂದು ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!