ಕಟ್ಟತ್ತಿಲ ಮಖಾಂ ಉರೂಸ್ ಪ್ರಯುಕ್ತ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಭೇಟಿ
ವಿಟ್ಲ: ಪ್ರಸಿದ್ಧ ಧಾರ್ಮಿಕ ಹಾಗೂ ಆದ್ಯಾತ್ಮಿಕ ಕೇಂದ್ರವಾದ ಕಟ್ಟತ್ತಿಲ ಮಖಾಂ ಶರೀಫ್ ಉರೂಸ್ ಮತ್ತು ಅನ್ನದಾನ ಕಾರ್ಯಕ್ರಮವು 2026ರ ಏಪ್ರಿಲ್ 19, ಆದಿತ್ಯವಾರ ಹಗಲು ಅದ್ದೂರಿಯಾಗಿ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ:
ಉರೂಸ್ ಪ್ರಯುಕ್ತ ಏಪ್ರಿಲ್ 10 ರಿಂದ ಏಪ್ರಿಲ್ 19 ರವರೆಗೆ ಸತತವಾಗಿ ಆಧ್ಯಾತ್ಮಿಕ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳು ಭಾರತದ ಗ್ರಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಘನ ನೇತೃತ್ವದಲ್ಲಿ ಜರುಗಲಿವೆ.
ಜಮಾಅತ್ ಪದಾಧಿಕಾರಿಗಳ ಭೇಟಿ:
ಉರೂಸ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಕಟ್ಟತ್ತಿಲ ಜಮಾಅತ್ ಸಮಿತಿಯ ಪ್ರಮುಖರು ಶೈಖುನಾ ಎ.ಪಿ. ಉಸ್ತಾದರನ್ನು ಭೇಟಿ ಮಾಡಿ, ಕಾರ್ಯಕ್ರಮದ ಕುರಿತು ಸಮಾಲೋಚನೆ ಹಾಗೂ ಪೋಸ್ಪರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿ.ಎ. ಅಬ್ದುಲ್ ಹಮೀದ್ ಹಾಜಿ (ಅಧ್ಯಕ್ಷರು, ಕಟ್ಟತ್ತಿಲ ಜಮಾಅತ್) ಕೆ.ಎಂ. ಮುಹ್ಯಿದ್ದೀನ್ ಮದನಿ (ಪ್ರಧಾನ ಕಾರ್ಯದರ್ಶಿ) ಬಿ.ಎಸ್. ಸ್ವಾದಿಕ್ (ಉರೂಸ್ ಕಾರ್ಯದರ್ಶಿ) ಇವರುಗಳು ಉಸ್ತಾದರನ್ನು ಭೇಟಿಯಾಗಿ ಉರೂಸ್ ಕಾರ್ಯಕ್ರಮದ ಯಶಸ್ಸಿಗಾಗಿ ದುವಾ ಆಶೀರ್ವಚನ ಹಾಗೂ ಮಾರ್ಗದರ್ಶನ ಪಡೆದುಕೊಂಡರು.
ಹತ್ತು ದಿನಗಳ ಕಾಲ ನಡೆಯುವ ಈ ಆಧ್ಯಾತ್ಮಿಕ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕಾಗಿ ಪ್ರೀತಿಯ ಆಮಂತ್ರಣ..
ಇತೀ : ಜಮಾಅತ್ & ಉರೂಸ್ ಕಮಿಟಿ ಕಟ್ಟತ್ತಿಲ




