March 11, 2026

ICC ಟಿ20 ವಿಶ್ವಕಪ್ ಗೆದ್ದ ಟ್ರೋಫಿಯನ್ನು ದೇವಾಲಯಕ್ಕೆ ಕೊಂಡೊಯ್ದ ಕ್ರಿಕೆಟ್ ತಂಡ: ಮಸೀದಿ, ಚರ್ಚ್‌, ಗುರುದ್ವಾರಕ್ಕೆ ಏಕೆ ಹೋಗಬಾರದು?: ಮಾಜಿ ಕ್ರಿಕೆಟಿಗ ಆಕ್ಷೇಪ

0
image_editor_output_image391236993-1773186687596.jpg

ಐಸಿಸಿ ಟಿ20 ವಿಶ್ವಕಪ್ 2026 ಗೆದ್ದ ಭಾರತ ತಂಡ ಟ್ರೋಫಿಯನ್ನು ದೇವಾಲಯಕ್ಕೆ ಕೊಂಡೊಯ್ದಿರುವುದಕ್ಕೆ ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಕೀರ್ತಿ ಆಝಾದ್ ಅವರು ತೀವ್ರವಾಗಿ ಖಂಡಿಸಿದ್ದಾರೆ. “ಈ ಟ್ರೋಫಿ ಮಸೀದಿಗೆ ಏಕೆ ಹೋಗಬಾರದು? ಚರ್ಚ್‌ಗೆ ಏಕೆ ಹೋಗಬಾರದು? ಗುರುದ್ವಾರಕ್ಕೆ ಏಕೆ ಹೋಗಬಾರದು? ಇದು ಕೇವಲ ಒಂದು ಧರ್ಮದ ವಿಜಯೋತ್ಸವವಲ್ಲ! ಭಾರತ ತಂಡಕ್ಕೆ ನಾಚಿಕೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರದಂದು ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್‌ನಲ್ಲಿ ಜಯಭೇರಿ ಬಾರಿಸಿದ ಭಾರತ ತಂಡ ಸತತ 2ನೇ ಬಾರಿ ಚುಟುಕು ಕ್ರಿಕೆಟ್ ನ ವಿಶ್ವಚಾಂಪಿಯನ್ ಆಗಿತ್ತು. ಗೆದ್ದ ಟ್ರೋಫಿಯೊಂದಿಗೆ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಐಸಿಸಿ ಮುಖ್ಯಸ್ಥ ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮೊದಲಾದವರು ಅಹ್ಮದಾಬಾದ್‌ನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದನ್ನು ಈಗ1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದ ಕೀರ್ತಿ ಆಝಾದ್ ಅವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!