March 11, 2026

ಶ್ರೀಮಂತರ ಹನಿ ಟ್ರ್ಯಾಪ್: ಲಾಡ್ಜ್‌ಗೆ ಕರೆಸಿಕೊಂಡು ಹಣ ಲೂಟಿ: ಖತರ್ನಾಕ್ ಲೇಡಿ ಅರೆಸ್ಟ್

0
image_editor_output_image-1807066660-1773186437281.jpg

ಬೆಳಗಾವಿ : ಆಕೆ ಫ್ಯಾಷನ್ ಡಿಸೈನ‌ರ್. ಶ್ರೀಮಂತರೇ ಆಕೆಯ ಟಾರ್ಗೆಟ್. ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ಲಾಡ್ಜ್‌ಗೆ ಕರೆಸಿಕೊಂಡು ಅವರ ಹಣ, ಚಿನ್ನ, ಅಮೂಲ್ಯ ವಸ್ತುಗಳಿಗೆ ಕನ್ನ ಹಾಕುತ್ತಿದ್ದಳು. ಇದೀಗ ಈ ಖತರ್ನಾಕ್ ಲೇಡಿ ಬೆಳಗಾವಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಬಾಗಲಕೋಟೆ ಮೂಲದವಳಾದ 33 ವರ್ಷದ ದೀಪಾ ಅವಟಗಿ ಬಂಧಿತ ಮಹಿಳೆ. ಫ್ಯಾಷನ್ ಡಿಸೈನರ್ ಆಗಿದ್ದ ಆಕೆಗೆ ಹಣದ ವ್ಯಾಮೋಹ ಹುಟ್ಟಿಕೊಂಡಿತ್ತು. ಹೀಗಾಗಿ ಆಕೆ ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುತ್ತಿದ್ಲು.

ಫೋನ್ ನಂಬ‌ರ್ ಪಡೆದು ಮೆಸೇಜ್ ಮಾಡಿ ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು, ಬಂದ ಗಂಡಸರ ಜೊತೆ ಸಲುಗೆಯಿಂದ ವರ್ತಿಸಿ, ಅವರನ್ನು ಮೊದಲು ಸ್ನಾನಕ್ಕೆ ಕಳುಹಿಸುತ್ತಿದ್ದಳು. ಈ ವೇಳೆ ಅವರ ಬಳಿಯಿದ್ದ ಹಣ, ಚಿನ್ನ, ಬ್ಯಾಗ್‌ ಹಾಗೂ ಕಾರುಗಳೊಂದಿಗೆ ಎಸ್ಕೆಪ್ ಆಗುತ್ತಿದ್ದಳು.

ಬಾಗಲಕೋಟೆ ಮೂಲದವಳಾದ 33 ವರ್ಷದ ದೀಪಾ ಅವಟಗಿ ಬಂಧಿತ ಮಹಿಳೆ. ಫ್ಯಾಷನ್ ಡಿಸೈನರ್ ಆಗಿದ್ದ ಆಕೆಗೆ ಹಣದ ವ್ಯಾಮೋಹ ಹುಟ್ಟಿಕೊಂಡಿತ್ತು. ಹೀಗಾಗಿ ಆಕೆ ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುತ್ತಿದ್ದು.

ಇದೀಗ ದೀಪಾಳಿಂದ ಮೋಸ ಹೋಗಿದ್ದ ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಆಕೆಯ ನಿಜ ಬಣ್ಣ ಬಯಲಾಗಿದೆ. ದೀಪಾಳ ಈ ಖತರ್ನಾಕ್ ಕೆಲಸಕ್ಕೆ ಆಕೆಯ ಆಪ್ತ ಸ್ನೇಹಿತ ಬೆಳಗಾವಿಯ ಶಿವಾನಂದ ಮಠಪತಿ ಸಾಥ್ ನೀಡುತ್ತಿದ್ದ. ಆಕೆಗೆ ಶ್ರೀಮಂತ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತಿದ್ದ. ಆದರೆ, ಅದ್ಯಾವಾಗ ದೀಪಾ ಪೊಲೀಸರ ಬಲೆಗೆ ಬಿದ್ದಳೋ ಶಿವಾನಂದ ಎಸ್ಕೆಪ್ ಆಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!