ನಾಲ್ಕು ಮಹಡಿಯ ವಸತಿ ಕಟ್ಟಡ ಕುಸಿತ: 9 ಮಂದಿ ಮೃತ್ಯು, ಹಲವಾರು ಮಂದಿ ಸಿಲುಕಿರುವ ಶಂಕೆ
ಮುಂಬೈ: ನಾಲ್ಕು ಮಹಡಿಯ ವಸತಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ 9 ಜನರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಭಿವಂಡಿಯ ಬಾಲಾಜಿ ನಗರ ಗಂಗಾರಾಮ್ವಾಡಿ ಪ್ರದೇಶದಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಹಿನೂರ್ ಅಪಾರ್ಟ್ಮೆಂಟ್ ಎಂದು ಗುರುತಿಸಲಾದ ಕಟ್ಟಡವು ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು ದಿಢೀರನೆ ಕುಸಿದು ಬಿದ್ದಿದೆ.
ಕಟ್ಟಡ ಕುಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳನ್ನು ತೆರವುಗೊಳಿಸಲು ವಿಶೇಷ ರಕ್ಷಣಾ ತಂಡಗಳ ಜೊತೆಗೆ ಬೃಹತ್ ಯಂತ್ರೋಪಕರಣಗಳನ್ನು ನಿಯೋಜಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ , ಥಾಣೆ ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.




