September 16, 2026

ಕಡಬ: ಗಾಳಿಗೆ ಅಡಿಕೆ ಮರ ಮುರಿದು ಬಿದ್ದು ವ್ಯಕ್ತಿ ಸಾವು

0
IMG-20260731-WA0118

ಕಡಬ: ಮಳೆಗಾಳಿಗೆ ಅಡಿಕೆಮರ ಮುರಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳದಲ್ಲಿ ನಡೆದಿದೆ.

ಯಾದವ ಗೌಡ (66) ಎಂಬವರು ಮೃತಪಟ್ಟವರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಬೀಸಿದ ಮಳೆಗಾಳಿಗೆ ಅಡಿಕೆಮರ ಮುರಿದು ಬಿದ್ದು ಯಾದವ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಗಣೇಶ್ ಸವಣೂರ, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!