March 11, 2026

ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಕುಕ್ಕಾಜೆ ಇದರ ನೂತನ ಆಡಳಿತ ಕಮಿಟಿ ಅಸ್ತಿತ್ವಕ್ಕೆ: ಉಚ್ಛ ನ್ಯಾಯಾಲಯದ ಆದೇಶದಂತೆ ನಡೆದ ಚುನಾವಣೆ

0
IMG-20260310-WA0061

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿರುವ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಕುಕ್ಕಾಜೆ ಇದರ ಆಡಳಿತ ಕಮಿಟಿಯ ಚುನಾವಣೆಯು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ದಿನಾಂಕ 25-01-2025 ರಂದು ಕುಕ್ಕಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆದಿರುತ್ತದೆ. ಆದರೆ ಇತರ ಜಮಾಅತಿನ ಸದಸ್ಯರು ಕುಕ್ಕಾಜೆ ಜಮಾಅತಿನಲ್ಲಿ ಚುನಾವಣೆ ಉದ್ದೇಶಕ್ಕೆ ಮತದಾನಕ್ಕೆ ಸದಸ್ಯತ್ವವನ್ನು ಪಡೆದಿದ್ದು ಸರಿಯವರಿಗೆ ಮತದಾನ ಮಾಡಲು ಅವಕಾಶ ಇಲ್ಲವೆಂದು ಚುನಾವಣಾ ಅಧಿಕಾರಿಗಳು ಸದ್ರಿಯವರ ಹೆಸರು ಮತದಾರ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಇತರ ಜಮಾಅತಿನ ಕೆಲವೊಂದು ವ್ಯಕ್ತಿಗಳು ಸದ್ರಿ ಚುನಾವಣೆಯನ್ನು ಸ್ಥಗಿತಗೊಳಿಸಬೇಕೆಂದು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿರುವುದರಿಂದ ಚುನಾವಣೆ ದಿವಸದಂದು ಪಲಿತಾಂಶ ಘೋಷಣೆ ಮಾಡಬಾರದೆಂದು ಮಾನ್ಯ ಉಚ್ಚ ನ್ಯಾಯಾಲಯದಿಂದ ಆದೇಶವಾಗಿರುತ್ತದೆ ಅದರಂತೆ ವಕ್ಸ್ ಅಧಿಕಾರಿಗಳು ಪಲಿತಾಂಶವನ್ನು ತಡೆಯಿಡಿದಿರುತ್ತಾರೆ. ತದನಂತರ ಸಮಯದ ನಂತರ ಉಚ್ಚನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ನಡೆದು ಅಂತಿಮವಾಗಿ ದಿನಾಂಕ 12-02-2026 ರಂದು ಉಚ್ಚ ನ್ಯಾಯಾಲಯದಲ್ಲಿ ಸದ್ರಿ ಚುನಾವಣೆ ಪಲಿತಾಂಶ ಘೋಷಿಸುವಂತೆ ತೀರ್ಪು ನೀಡಿರುತ್ತಾರೆ.. ಅದರಂತೆ ದಿನಾಂಕ 10-03-2026 ರಂದು ಜಿಲ್ಲಾ ವಕ್ಸ್ ಅಧಿಕಾರಿಗಳು ಮತ್ತು ಜುಮ್ಮಾ ಮಸೀದಿಯ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 25-01-2025 ರಂದು ನಡೆದ ಚುನಾವಣೆಯ 22 ಅಭ್ಯರ್ಥಿಗಳ ಪಲಿತಾಂಶವನ್ನು ಕುಕ್ಕಾಜೆ ಮದರಸ ಸಭಾಂಗಣದಲ್ಲಿ ಪ್ರಕಟಿಸಿರುತ್ತಾರೆ. ಸದ್ರಿ ಪಲಿತಾಂಶದಲ್ಲಿ 11 ಅಭ್ಯರ್ಥಿಗಳು 1) ಮೊಹಿದಿನಬ್ಬ ಹಾಜಿ. 2) ಅಬ್ದುಲ್ ರಝಾಕ್ ಮಂಚಿ 3) ಬದ್ರುದ್ದೀನ್ 4) ಅಹಮ್ಮದ್ ಬೈಲ್ 5) ಮೊಹಿದುಕುಂಞ ಕುರಿಯಪ್ಪಾಡಿ 6) ಅಶ್ರಫ್ ನಾಡಾಜೆ 7) ಮಹಮ್ಮದ್ ದರ್ಖಾಸು 8) ಉಮ್ಮರ್ ಬಾಬುಕೋಡಿ 9) ಮಹಮ್ಮದ್ ಪಂಜಿಕಲ್ಲು 10) ಹಮೀದ್ ಬೈಲ್ 11) ಅನ್ಸಾರ್ ಅಝ್ ಅರಿ ಇವರು ಅತೀ ಹೆಚ್ಚು ಸುಮಾರು 500 ಕ್ಕೂ ಅಧಿಕ ಮತವನ್ನು ಪಡೆದು ಚುನಾಯಿತಾಗಿರುತ್ತಾರೆ. ಎಂದು ಅಧಿಕಾರಿಗಳು ಘೋಷಿಸಿರುವುದರಿಂದ ಸದ್ರಿ 11 ಮಂದಿ ಸದಸ್ಯರು ಮುಂದಿನ ಮೂರು ವರ್ಷಗಳ ಅವಧಿಗೆ ಮಸೀದಿಯ ಆಡಳಿತ ಕಮಿಟಿಯ ನೂತನ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *

You may have missed

error: Content is protected !!