May 2, 2026

ವಿಟ್ಲ: 1,79,700 ರೂ. ಅಂದಾಜು ಮೌಲ್ಯದ ಎಂಡಿಎಂಎ ವಶಕ್ಕೆ: ನಾಲ್ವರು ಆರೋಪಿಗಳ ಬಂಧನ

0
IMG-20260311-WA0000.jpg

ವಿಟ್ಲ: ನೇರಳಕಟ್ಟೆ ಭಗವಂತಕೋಡಿ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ‌ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಪತ್ತೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಶ್ರಫ್ ಜಿ, ಆಶ್ರಫ್ ಎನ್ ಎ, ಅಫ್ವಾನ್ ಮತ್ತು ಹಫೀಜ್ ಯಾನೆ ಅಪ್ಪಿ ಬಂಧಿತ ಆರೋಪಿಗಳು.
ಇವರಿಂದ 1.79,700ರೂ. ಅಂದಾಜು ಬೆಲೆಯ
17.97 ಗ್ರಾಂ ತೂಕದ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಶ್ರಫ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತು ಎಮ್.ಡಿ.ಎಮ್.ಎಯನ್ನು ಸಂಗ್ರಹಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸರು ಅಶ್ರಫ್‌ ಮನೆಗೆ ತೆರಳಿದಾಗ ಅಲ್ಲಿ ಆತ‌ ಜತೆ ಹಫೀಝ್‌ ಯಾನೆ ಅಪ್ಪಿ, ಅಫ್ವಾನ್‌ ಮತ್ತು ಅಶ್ರಫ್‌ ಎನ್‌ ಎ. ಅವರಿದ್ದರು. ಆತನ ಮನೆಯನ್ನು ಪರಿಶೀಲಿಸಿದಾಗ ಎಂಡಿಎಂಎ ಮಾದಕವಸ್ತು, ಚೂರಿ ಹಾಗೂ ಇತರೆ ಸೊತ್ತುಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!